ಬೆಂಗಳೂರು: ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡಾ. ನರಹಳ್ಳಿ ಪ್ರತಿಷ್ಠಾನ’ ಕನ್ನಡ ಬರಹಗಾರರಿಗೆ ಪ್ರತಿ ವರ್ಷವೂ ಪ್ರಶಸ್ತಿ ನೀಡುತ್ತಿದ್ದು, 2017ರ ಸಾಲಿನ ‘ನರಹಳ್ಳಿ ಪ್ರಶಸ್ತಿ’ಗೆ ಲೇಖಕ ಎಂ.ಆರ್. ದತ್ತಾತ್ರಿ ಆಯ್ಕೆಯಾಗಿದ್ದಾರೆ.
₹10 ಸಾವಿರ ನಗದು ಹಾಗೂ ಫಲಕವನ್ನು ‘ನರಹಳ್ಳಿ ಪ್ರಶಸ್ತಿ’ಒಳಗೊಂಡಿದೆ. ವೃತ್ತಿಯಿಂದ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ದತ್ತಾತ್ರಿ ಅವರು ಅಂಕಣ ಬರಹ, ಕವನ ಸಂಕಲನ, ಲಲಿತ ಪ್ರಬಂಧಗಳು ಹಾಗೂ ಕಾದಂಬರಿ ‘ದ್ವೀಪವ ಬಯಸಿ’ ಮೂಲಕ ಎಲ್ಲರಿಗೂ ಪರಿಚಯ.
ಸೆ. 24ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಚ್. ಎಸ್ ವೆಂಕಟೇಶಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.