ಬೆಂಗಳೂರು: ನಗರದ ಐಐಎಂ–ಬಿಯಲ್ಲಿರುವ ಎರಡು ವರ್ಷಗಳ ಎಂಬಿಎ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳು ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗಿದ್ದಾರೆ.
ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ, ಈ ಬಾರಿ (2019–21ನೇ ಶೈಕ್ಷಣಿಕ ವರ್ಷ) ಅವರ ಸಂಖ್ಯೆಯಲ್ಲಿ ಶೇ 10ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ಬಾರಿ ಶೇ 27ರಷ್ಟಿದ್ದರೆ, ಈ ಬಾರಿ ಶೇ 37ರಷ್ಟು ಮಹಿಳೆಯರಿದ್ದಾರೆ.
‘441 ಅಭ್ಯರ್ಥಿಗಳ ಪೈಕಿ 165 ಮಂದಿ ಮಹಿಳೆಯರು. ಇವರಲ್ಲಿ ಶೇ 18ರಷ್ಟು ಮಂದಿ 2 ವರ್ಷ ಕೆಲಸದ ಅನುಭವ ಇರುವ ಹೊಸಬರು ಮತ್ತು ಶೇ 18ರಷ್ಟು ಮಂದಿ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಹೊರತಾದವರು. ಹೀಗಾಗಿ ಒಂದು ಆಸಕ್ತಿದಾಯಕ ವಿದ್ಯಾರ್ಥಿ ಸಮುದಾಯವನ್ನು ಇಲ್ಲಿ ನೋಡಬಹುದಾಗಿದೆ’ ಎಂದು ನೇಮಕಾತಿ ಮತ್ತು ಹಣಕಾಸು ನೆರವು ವಿಭಾಗದ ಮುಖ್ಯಸ್ಥ ಜಿ.ಶಬರಿನಾಥ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.