ADVERTISEMENT

ಕಮಲೇಶ್ ತಿವಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2015, 19:30 IST
Last Updated 11 ಡಿಸೆಂಬರ್ 2015, 19:30 IST

ಬೆಂಗಳೂರು:  ಉತ್ತರ ಪ್ರದೇಶದ ಹಿಂದೂ ಮಹಾಸಭಾದ ಅಧ್ಯಕ್ಷ ಕಮ ಲೇಶ್ ತಿವಾರಿ ಅವರು ಪ್ರವಾದಿ ಮಹ ಮದ್‌ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳು ನಗರ ದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು.

ಮರ್ಕಜೆ ಅಹ್ಲೆ ಸುನ್ನತ್‌ ಜಾಮಿಯಾ ಹಜರತ್ ಬಿಲಾಲ್‌ ಸಂಘಟನೆ ವತಿ ಯಿಂದ ಪುರಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್‌ ಅಹಮದ್‌ ಖುರೇಷಿ, ‘ಕಮ ಲೇಶ್ ತಿವಾರಿ ಪ್ರವಾದಿ ಮಹಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಪ್ರಕರಣದಲ್ಲಿ ಪೊಲೀಸರು ಕಮ ಲೇಶ್ ತಿವಾರಿಯನ್ನು ಬಂಧಿಸಿದ ನಂತರ ಹಿಂದೂ ಮಹಾಸಭಾ, ಆತ ಸಂಘಟ ನೆಯ ಸದಸ್ಯ ಅಲ್ಲ ಎಂದು ಹೇಳುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
‘ಕೆಲವು ಮೂಲಭೂತವಾದಿಗಳು ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡುವ ಕೆಲಸ ಮಾಡುತ್ತಿ ದ್ದಾರೆ. ಇತ್ತೀಚೆಗೆ ಟಿಪ್ಪು ಜಯಂತಿ ಆಚ ರಣೆ  ಕಾರ್ಯಕ್ರಮದಲ್ಲಿಯೂ ಇದೇ ರೀತಿ ಆಯಿತು’ ಎಂದರು.

ಸಂಘಟನೆಯ ಅಧ್ಯಕ್ಷ ಅಮೀರ್‌ ಜಾನ್‌ ಮಾತನಾಡಿ, ‘ಕಮ ಲೇಶ್‌ ತಿವಾರಿ, ಪ್ರವಾದಿ ಮಹಮದ್ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಸಾರ್ವಜನಿಕ ಸಭೆ: ಮಲೇಶ್ ತಿವಾರಿ ಹೇಳಿಕೆ ಖಂಡಿಸಿ ವಿವಿಧ ಮುಸ್ಲಿಂ ಸಂಘ ಟನೆಗಳು  ಕಂಟೋನ್ಮೆಂಟ್ ಬಳಿಯ ಖುದ್ದೂಸ್ ಸಾಹೇಬ್‌ ಈದ್ಗಾ ಮೈದಾನ ದಲ್ಲಿ ಶುಕ್ರವಾರ ಸಂಜೆ ಸಭೆ ನಡೆಸಿದವು.

ಹೆಚ್ಚಿನ ದಟ್ಟಣೆ
ಸಭೆಗೆ ಬಂದಿದ್ದ ಹೆಚ್ಚಿನ ಸಂಖ್ಯೆಯ ಜನ ರಸ್ತೆ ಬದಿ ವಾಹನ ನಿಲ್ಲಿಸಿದ್ದರು. ಹೀಗಾಗಿ ಕಂಟೋನ್ಮೆಂಟ್‌ ಸುತ್ತಮುತ್ತ, ನಂದಿದುರ್ಗ ರಸ್ತೆ, ಜಯಮಹಲ್‌ ರಸ್ತೆ, ಜೆ.ಸಿ.ರಸ್ತೆಯಲ್ಲಿ ಹೆಚ್ಚಿನ ದಟ್ಟಣೆ ಉಂಟಾಗಿದ್ದರಿಂದ ವಾಹನ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.