ಬೆಂಗಳೂರು: ರಾಜಾ ರವಿವರ್ಮ ಅವರ ಕಲಾಕೃತಿಗಳ ಕಲ್ಲಚ್ಚುಗಳನ್ನು (ಲಿಥೋಗ್ರಫಿ) ಕಲಾಸಕ್ತರು ಈಗ ಗೂಗಲ್ ಆರ್ಟ್ಸ್ ಆ್ಯಂಡ್ ಕಲ್ಚರ್‌ನಲ್ಲಿ ವೀಕ್ಷಿಸಬಹುದು.
ರಾಜಾ ರವಿವರ್ಮ ಹೆರಿಟೇಜ್ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾಂಜಲಿ ಮೈನಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರವಿವರ್ಮ ಅವರ ಒರಿಜಿನಲ್ ಕಲಾಕೃತಿಗಳ ನಕಲೇ ಲಿಥೋಗ್ರಫಿ. ಒಟ್ಟು 132 ಕಲ್ಲಚ್ಚುಗಳನ್ನು ನಾವು ಸಂಗ್ರಹಿಸಿದ್ದೇವೆ. ಈ ಪೈಕಿ 130 ಕಲ್ಲಚ್ಚುಗಳು ಗೂಗಲ್‌ನಲ್ಲಿ ವೀಕ್ಷಣೆಗೆ ಲಭ್ಯ ಇವೆ. ಅವುಗಳ ವೀಕ್ಷಣೆಗೆ ಲಿಂಕ್: https://www.google.com/culturalinstitute/beta/partner/the-raja-ravi-varma-heritage-foundation’ ಎಂದರು.
‘ಗೂಗಲ್‌ನವರು ಗಿಗಾಫಿಕ್ಸೆಲ್ ತಂತ್ರಜ್ಞಾನ ಬಳಸಿ ಲಿಥೋಗ್ರಫಿಗಳ ಚಿತ್ರ ತೆಗೆದಿದ್ದಾರೆ. ಜಗತ್ತಿನ ಎಲ್ಲೆಡೆಯ ಕಲಾಸಕ್ತರು ಇವುಗಳನ್ನು ಸುಲಭದಲ್ಲಿ ವೀಕ್ಷಿಸಬಹುದು. ರವಿವರ್ಮ ಅವರ ಕಲಾಕೃತಿಗಳ ಸಂರಕ್ಷಣೆಗೆ ಸಿಕ್ಕ ಶ್ರೇಷ್ಠ ಮನ್ನಣೆ ಇದು’ ಎಂದು ಅವರು ಹೇಳಿದರು.
ಫೌಂಡೇಷನ್‌ನ ಗೌರವ ಕಾರ್ಯದರ್ಶಿ ಗಣೇಶ್ ವಿ. ಶಿವಸ್ವಾಮಿ ಮಾತನಾಡಿ, ‘ರವಿವರ್ಮ ಅವರ ಕಲಾಕೃತಿಗಳು ಎಷ್ಟಿವೆ ಎಂಬ ನಿಖರ ಮಾಹಿತಿ ನಮಗೆ ಇಲ್ಲ. ಹಲವು ವರ್ಷಗಳಿಂದ ಲಿಥೋಗ್ರಫಿಗಳನ್ನು ಸಂಗ್ರಹಿಸುತ್ತಾ ಬಂದಿದ್ದೆವು. ಈಗ ಬಹುದಿನದ ಕನಸು ನನಸಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.