ಬೆಂಗಳೂರು: ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ‘ಸಂಚಾರ ಸುರಕ್ಷತಾ ಸಪ್ತಾಹ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ಸಂಚಾರಿ ಪೊಲೀಸ್ ಬಿ.ಶಿವಕುಮಾರ್ ಮಾತನಾಡಿ ‘ಸಂಚಾರಿ ನಿಯಮಗಳನ್ನು ಪಾಲಿಸಿ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಅಪಘಾತವಾದ ತಕ್ಷಣ ‘100’ಗೆ ಕರೆಮಾಡಿ ಅವರ ಪ್ರಾಣ ಉಳಿಸಿ, ಯಾವುದೇ ಕಾರಣಕ್ಕೂ ಕುಡಿದು ವಾಹನ ಚಾಲನೆ ಮಾಡಬೇಡಿ’ ಎಂದರು.
ಈ ಸಂದರ್ಭದಲ್ಲಿ ಜಾಲಹಳ್ಳಿ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಧರ್ಮಪ್ಪ, ಎ.ಎಸ್.ಐ. ತಿಮ್ಮೇಗೌಡ, ಪ್ರಾಂಶುಪಾಲ ಡಾ.ಸಾಬುಜಾರ್ಜ್, ಉಪಪ್ರಾಂಶುಪಾಲ ವಿನೀತ್ ಜಾರ್ಜ್, ಎನ್.ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.