ADVERTISEMENT

‘ದಲಿತರನ್ನು ಬಳಸ್ತಾರೆ, ಬಿಸಾಡ್ತಾರೆ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:29 IST
Last Updated 9 ಜುಲೈ 2017, 19:29 IST
‘ದಲಿತರನ್ನು ಬಳಸ್ತಾರೆ, ಬಿಸಾಡ್ತಾರೆ’
‘ದಲಿತರನ್ನು ಬಳಸ್ತಾರೆ, ಬಿಸಾಡ್ತಾರೆ’   

ಬೆಂಗಳೂರು: ‘ಶತಮಾನಗಳಿಂದಲೂ ಆಡಳಿತ ವರ್ಗಗಳು ದಲಿತರನ್ನು ಬಳಸಿ, ಬಿಸಾಡುತ್ತಾ ಬಂದಿವೆ.  ದಲಿತ ಸಂಘಟನೆಗಳಲ್ಲಿ ರಾಜಕೀಯ ಪ್ರವೇಶ ಮಾಡಿದೆ. ಹಾಗಾಗಿ, ಸಂಘಟನೆಗಳು ಹೆಚ್ಚುತ್ತಿವೆ. ಅವರ ಸಮಸ್ಯೆಗಳು ಕಡಿಮೆ ಆಗುತ್ತಿಲ್ಲ’ ಎಂದು ಪ್ರಾಧ್ಯಾಪಕ ಡಾ.ಎನ್‌.ಚಿನ್ನಸ್ವಾಮಿ ಹೇಳಿದರು.

ದಿ ಮಿಥಿಕ್‌ ಸೊಸೈಟಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು’ ಕುರಿತ ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ರಾಹ್ಮಣೇತರರ ಚಳವಳಿಯನ್ನು ಹತ್ತಿಕ್ಕಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತರಿಗೆ ಶಿಕ್ಷಣ ನೀಡಿದರು. ಲಿಂಗಾಯತ ಮತ್ತು ಒಕ್ಕಲಿಗರ ಆರ್ಥಿಕ ಪ್ರಾಬಲ್ಯ ಮುರಿಯಲು ಹಾಗೂ ಬ್ರಾಹ್ಮಣರ ಜಮೀನುಗಳಲ್ಲಿ ಗೇಣಿದಾರರಾಗಿ ದುಡಿಯುತ್ತಿದ್ದ ದಲಿತರನ್ನು ಮುಕ್ತಗೊಳಿಸಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರಲ್ಲಿ ಜನಪರ ಕಾಳಜಿಯೂ ಇತ್ತು’ ಎಂದರು.

ADVERTISEMENT

‘ದೇಶದ ಸ್ವಾತಂತ್ರ್ಯ ಮತ್ತು ರಾಜ್ಯದ ಏಕೀಕರಣ ಚಳವಳಿಯಲ್ಲಿ ದಲಿತರು ಸಕ್ರಿಯರಾಗಿದ್ದರು. ಹಿಂದುಳಿದವರು ರಾಜಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಅರಮನೆ ಪ್ರವೇಶಕ್ಕೆ ಅವಕಾಶ ನೀಡಿದರು. ಆಡಳಿತದಲ್ಲಿ ಹುದ್ದೆಗಳನ್ನು ನೀಡಿದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.