ADVERTISEMENT

ದಾಖಲೆಗಳಿಲ್ಲದ ನಗದು ವಶ

​ಪ್ರಜಾವಾಣಿ ವಾರ್ತೆ
Published 25 ಮೇ 2018, 20:15 IST
Last Updated 25 ಮೇ 2018, 20:15 IST

ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದನ್ನು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಚುನಾವಣೆ ಅಕ್ರಮ ತಡೆಯಲು ಹೊರವರ್ತುಲ ರಸ್ತೆಯ, ಮಲ್ಲತಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ಚೆಕ್‌ಪೋಸ್ಟ್‌ನಲ್ಲಿ ಉಬರ್‌ ಕ್ಯಾಬ್‌ ಕಂಪನಿಗೆ ಸೇರಿದ ಕಾರೊಂದನ್ನು ನಿಲ್ಲಿಸಿ ಪರಿಶೀಲಿಸಿದಾಗ ನಗದು ಇರುವುದು ಪತ್ತೆಯಾಗಿದೆ.

ನಗದು ಸಾಗಿಸುತ್ತಿರುವ ಬಗ್ಗೆ ಕಾರಿನಲ್ಲಿದ್ದ ಮಾರುತಿ ರೆಡ್ಡಿ ಅವರ ಬಳಿ ಸೂಕ್ತ ದಾಖಲೆಗಳಿರಲಿಲ್ಲ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಒಯ್ಯಲಾಗುತ್ತಿದೆ ಎನ್ನುವ ಅನುಮಾನದ ಮೇಲೆ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.