ADVERTISEMENT

ದೆಹಲಿ ವಿವಿ ಕನ್ನಡ ಪೀಠಕ್ಕೆ ರೂ43 ಲಕ್ಷ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2014, 20:28 IST
Last Updated 13 ನವೆಂಬರ್ 2014, 20:28 IST

ಬೆಂಗಳೂರು: ದೆಹಲಿಯ ಜವಾಹರ­ಲಾಲ್‌ ನೆಹರು ವಿಶ್ವವಿದ್ಯಾಲಯ­ದಲ್ಲಿ ಕನ್ನಡದ ಅಧ್ಯಯನ ಪೀಠ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂ 43 ಲಕ್ಷ ಮಂಜೂರು ಮಾಡಿದೆ.

ಪೀಠ ಸ್ಥಾಪನೆಗೆ ರೂ4 ರಿಂದ  5 ಕೋಟಿ ನೀಡುವಂತೆ ವಿಶ್ವವಿದ್ಯಾಲಯ ಕೋರಿತ್ತು. ಆದರೆ, ಮೊದಲ ಹಂತವಾಗಿ ರೂ 50 ಲಕ್ಷ ಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಪ್ಪಿತ್ತು.

ಆದರೆ, ‘ಅಷ್ಟು ದೂರ ಹೋಗಿ ಕನ್ನಡದ ಅಧ್ಯಯನ ಯಾರು ಮಾಡು­ತ್ತಾರೆ? ಹಣ ಸುಮ್ಮನೆ ವ್ಯರ್ಥ­ವಾಗುತ್ತದೆ’ ಎಂದು ಕಾರಣ ನೀಡಿ ಅನುದಾನ ಬಿಡುಗಡೆಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.