ಬೆಂಗಳೂರು: ಧ್ವನಿವರ್ಧಕಗಳಲ್ಲಿ ಮತ್ತು ಬಟ್ಟೆಯಲ್ಲಿ ಚಿನ್ನದ ಬಿಸ್ಕತ್‌ಗಳನ್ನು ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ, ಪ್ರತ್ಯೇಕ ಪ್ರಕರಣಗಳಲ್ಲಿ ಆರು ಪ್ರಯಾಣಿಕರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ನೂರ್ಲಾನಿ, ಅಲಿ, ಅಬ್ದುಲ್ ಖಾದಿರ್, ನಾಗೂರ್‌ಮೆವನ್, ಸತಿಕ್ ಬಚ್ತಾ ಮತ್ತು ಶಾಹಲ್ ಹಮೀದ್ ಬಂಧಿತರು.
ಮೊದಲ ಪ್ರಕರಣದಲ್ಲಿ ಸಿಂಗಾಪುರದಿಂದ ನಿಲ್ದಾಣಕ್ಕೆ ಬರುತ್ತಿದ್ದ ನೂರ್ಲಾನಿ, ಸಂಗೀತ ಪರಿಕರಗಳಲ್ಲಿ ಚಿನ್ನದ ಬಿಸ್ಕತ್‌ಗಳನ್ನು ಇಟ್ಟುಕೊಂಡಿದ್ದ. ಮೊದಲು ಪರಿಶೀಲನೆಯಲ್ಲಿ ಚಿನ್ನ ಇರುವುದು ತಿಳಿಯಲಿಲ್ಲ. ಎಕ್ಸ್‌ರೇ ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಧ್ವನಿವರ್ಧಕಗಳಲ್ಲಿ ₹ 9.2 ಮೌಲ್ಯದ 92 ಚಿನ್ನದ ಬಿಸ್ಕತ್‌ಗಳಿದ್ದವು. ಒಂದು ಬಿಸ್ಕತ್‌ನ ಗಾತ್ರ 100 ಗ್ರಾಂ ತೂಕವಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.