ಬೆಂಗಳೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದರಿಂದ ನಗರದಲ್ಲೂ ಭಾನುವಾರ (ಜುಲೈ 14) ಮಧ್ಯರಾತ್ರಿಯಿಂದಲೇ ಪರಿಷ್ಕೃತ ಪೆಟ್ರೋಲ್ ದರ ಜಾರಿಗೆ ಬಂದಿದೆ.
ನಗರದ ಒಳಭಾಗದ (ಬಿಎಸ್-4) ಬಂಕ್‌ಗಳಲ್ಲಿ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 75.27 ಇತ್ತು. ಇದೀಗ ಪರಿಷ್ಕೃತ ದರ ರೂ. 77.26 ಆಗಿದೆ. ನಗರದ ಹೊರಭಾಗದ (ಬಿಎಸ್-3) ಬಂಕ್‌ಗಳಲ್ಲಿ ಈ ಹಿಂದೆ ರೂ. 74.73 ಇದ್ದ ಲೀಟರ್ ಪೆಟ್ರೋಲ್ ಬೆಲೆ ಈಗ ರೂ. 76.73ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.