ಬೆಂಗಳೂರು: ಇಡೀ ತಿಂಗಳಿನಲ್ಲಿ ಸುರಿಯದಷ್ಟು ಮಳೆ ಒಂದೆರಡು ಗಂಟೆಯಲ್ಲಿ ಸುರಿಯುತ್ತಿದೆ. ಈ ಅಕಾಲಿಕ ಮಳೆಯಿಂದಾಗಿ ನಗರದಲ್ಲಿ ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
ಕೆರೆಗಳ ಬೀಡು ಎಂದೇ ಕರೆಸಿಕೊಂಡಿದ್ದ ಈ ಮಹಾನಗರದಲ್ಲಿ ಪ್ರವಾಹ ಕಾಣಿಸಿಕೊಳ್ಳುವುದಾದರೂ ಏತಕ್ಕೆ, ಅದಕ್ಕೆ ಕಡಿವಾಣ ಹಾಕಲು ಮಾರ್ಗೋಪಾಯಗಳೇನಾದರೂ ಇವೆಯೇ? ಭವಿಷ್ಯದಲ್ಲಿ ಜನರ ಬದುಕು ಮತ್ತೆ ‘ನೀರುಪಾಲು’ ಆಗುವುದನ್ನು ತಪ್ಪಿಸಲು ತಕ್ಷಣ ಮಾಡಬೇಕಾದ ಕಾರ್ಯಗಳೇನು.
ದೂರಗಾಮಿ ಯೋಜನೆಗಳೇನು ಎಂಬ ಬಗ್ಗೆ ಪರಿಸರ ತಜ್ಞ ಮೋಹನ ರಾವ್ ಹಾಗೂ ನಗರ ಯೋಜನಾ ತಜ್ಞ ವಿ.ರವಿಚಂದರ್ ಅವರು ಇಲ್ಲಿ ಬೆಳಕು ಚೆಲ್ಲಿದ್ದಾರೆ. 2016ರಲ್ಲಿ ಮಡಿವಾಳ ಹಾಗೂ ಬೆಳ್ಳಂದೂರು ಕೆರೆಗಳ ಪ್ರದೇಶಗಳಲ್ಲಿ ಕಾಣಿಸಿಕೊಂಡ ಪ್ರವಾಹಕ್ಕೆ ಕಾರಣವಾದ ಅಂಶಗಳ ಸಮಗ್ರ ಅಧ್ಯಯನ ನಡೆಸಿ ಒಂದು ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
* ಕಳೆದ ಎರಡು ದಶಕಗಳಿಂದೀಚೆಗೆ ನಗರಗಳಲ್ಲಿ ಪ್ರವಾಹಗಳು ಕಾಣಿಸಿಕೊಳ್ಳುತ್ತಿವೆ.
* ನಗರೀಕರಣ ಹೆಚ್ಚಳವಾದಂತೆ ಪ್ರವಾಹವೂ ಹೆಚ್ಚುತ್ತಿದೆ.
* ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
* ಪ್ರಾದೇಶಿಕ ಮಳೆ ಪ್ರಮಾಣದಲ್ಲಿ ವ್ಯತ್ಯಯವಾಗುತ್ತಿದೆ.
* ಸಣ್ಣ ಹಾಗು ಕಡಿಮೆ ಅವಧಿಯ ಮಳೆಗೂ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
2000ದಲ್ಲಿ ಹೈದರಾಬಾದ್, 2005ರಲ್ಲಿ ಮುಂಬೈ, 2006ರಲ್ಲಿ ಸೂರತ್, 2010ರಲ್ಲಿ ಗುವಾಹಟಿ, 2013ರಲ್ಲಿ ದೆಹಲಿ, ಕೋಲ್ಕತ್ತ, 2014ರಲ್ಲಿ ಶ್ರೀನಗರ, 2015ರಲ್ಲಿ ಚೆನ್ನೈ, 2016ರಲ್ಲಿ ಹಾಗೂ 2017ರಲ್ಲಿ ಬೆಂಗಳೂರು ಮಹಾಪ್ರವಾಹಗಳಿಗೆ ಸಾಕ್ಷಿಯಾಗಬೇಕಾಯಿತು.
ಬೆಂಗಳೂರು ನಗರದ ಗಮನಾರ್ಹ ಬದಲಾವಣೆಗಳು
ನಗರದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ತಾಪಮಾನ ಹೆಚ್ಚಳವಾಗಿ, ವಾತಾವರಣದ ಒತ್ತಡ ಕಡಿಮೆ ಆಗುತ್ತಿರುವುದು ಹಾಗೂ ಕೆಲವೆಡೆ ತಾಪಮಾನ ಕಡಿಮೆ ಆಗುತ್ತಿರುವುದು ಆಸುಪಾಸಿನ ಪ್ರದೇಶದಲ್ಲಿ ಮಳೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಪ್ರವಾಹಕ್ಕೆ ಕಾರಣವಾಗುವ ಪ್ರಾದೇಶಿಕ ಅಂಶಗಳು
* ನಿರ್ದಿಷ್ಟ ಅವಧಿಯಲ್ಲಿ ಬೀಳುವ ಮಳೆ ಪ್ರಮಾಣ ಹೆಚ್ಚಳವಾಗಿದೆ.
* ದಿನದಲ್ಲಿ ಅಥವಾ ಒಂದು ಗಂಟೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಹೆಚ್ಚುತ್ತಿದೆ.
ಸ್ಥಳೀಯ ಅಂಶಗಳು
* ನೈಸರ್ಗಿಕ ಹಳ್ಳಗಳನ್ನು ಮುಚ್ಚಲಾಗಿದೆ.
* ಕೆರೆ ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಅವುಗಳ ಸಾಮರ್ಥ್ಯ ಕುಸಿದಿದೆ.
* ಭೂಮಿಯೊಳಗೆ ನೀರು ಇಂಗುವ ಪ್ರಮಾಣ ಕುಸಿತವಾಗಿದೆ.
ಪರಿಣಾಮಗಳು
* ರಾಜಕಾಲುವೆ ಹಾಗೂ ಕೆರೆ ಕಟ್ಟೆಗಳು ಒಡೆಯುತ್ತಿವೆ.
* ಚರಂಡಿಗಳು ತುಂಬಿ ಹರಿದು, ನೀರು ರಸ್ತೆಯಲ್ಲೇ ಹರಿಯುತ್ತಿದೆ.
* ತಗ್ಗು ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
* ಜನಜೀವನ ಅಸ್ತವ್ಯಸ್ತ.
* ಜೀವ, ಆಸ್ತಿಪಾಸ್ತಿ ಹಾಗೂ ಮೂಲಸೌಕರ್ಯಗಳಿಗೆ ಹಾನಿ ಪ್ರವಾಹಕ್ಕೆ ಇದು ಕಾರಣ.
* ನೈಸರ್ಗಿಕ ಹಳ್ಳಗಳನ್ನು ಹಾಗೆಯೇ ಉಳಿಸಿಕೊಂಡಿಲ್ಲ.
* ಭೂಮಿಯ ಮೇಲ್ಮೈಯನ್ನು ಮಾರ್ಪಾಡು ಮಾಡಲಾಗಿದೆ.
* ರಾಜಕಾಲುವೆಗಳ ನಿರಂತರತೆಯನ್ನು ಉಳಿಸಿಕೊಂಡಿಲ್ಲ.
* ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಆಗಿದೆ
* ರಾಜಕಾಲುವೆ ಹಾಗೂ ಕೆರೆಗಳಲ್ಲಿ ಹೂಳು ತುಂಬಿದೆ
* ದ್ರವ ತ್ಯಾಜ್ಯ ಸೇರಿ ಕೆರೆಗಳ ಸಾಮರ್ಥ್ಯ ಕುಸಿದಿದೆ
(ಮಳೆ ನೀರು ಹರಿಯುವ ನೈಸರ್ಗಿಕ ರಚನೆಯಲ್ಲಿ ಮಾರ್ಪಾಡು ಮಾಡಿದ್ದರಿಂದ ಮಳೆ ನೀರು ಕಾಲುವೆಗಳಿಗೆ ಅವಶ್ಯಕತೆಗಿಂತ ಹೆಚ್ಚು ಮೂಲಸೌಕರ್ಯ ಕಲ್ಪಿಸಬೇಕಾಗಿದೆ)
ನೀರು ಪೂರೈಕೆ ಹಾಗೂ ನಿರ್ವಹಣೆಯಿಂದಾಗುತ್ತಿರುವ ಪರಿಣಾಮಗಳು
* 100 ಕಿ.ಮೀ. ದೂರದಲ್ಲಿರುವ ಕಾವೇರಿ ನದಿಯ ನೀರನ್ನು ಅದರ ಮಟ್ಟಕ್ಕಿಂತ ಮೇಲ್ಭಾಗದಲ್ಲಿರುವ ಪ್ರದೇಶಕ್ಕೆ ಪಂಪ್ ಮಾಡಲಾಗುತ್ತಿದೆ* ಅಂತರ್ಜಲ ಬಳಕೆ ಹೆಚ್ಚಿದೆ.
* ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಮಾತ್ರ ಕೆರೆ ನೀರನ್ನು ಬಳಸುತ್ತಿವೆ
* 135 ಕೋಟಿ ಲೀಟರ್ ಕಾವೇರಿ ನೀರು ನಿತ್ಯ ನಗರಕ್ಕೆ ಪೂರೈಕೆ ಆಗುತ್ತಿದೆ
* 7 ಕೋಟಿ ಲೀಟರ್‌ನಷ್ಟು ಅಂತರ್ಜಲವನ್ನು ದಿನವೊಂದಕ್ಕೆ ಮೇಲೆತ್ತಲಾಗುತ್ತಿದೆ
* ದಿನಬಳಕೆಗೆ ಅಂದಾಜು 160 ಕೋಟಿ ಲೀಟರ್ ನೀರಿನ ಅಗತ್ಯವಿದೆ
* ಬೇರೆ ಕಡೆಯಿಂದ ತರಿಸಿದ ನೀರು ಹಾಗೂ ಅಂತರ್ಜಲದಿಂದ ಬಳಸಿದ ನೀರು ಬಿಎಂಅರ್‌ಡಿಎ ಪ್ರದೇಶದ ವ್ಯಾಪ್ತಿಯಲ್ಲಿ ಮಳೆ ನೀರಿಗೆ ಹೆಚ್ಚುವರಿಯಾಗಿ ಸೇರಿಕೊಳ್ಳುತ್ತಿದೆ.
ಪರಿಣಾಮಗಳೇನು?
* ಭಾರಿ ನಷ್ಟ
* ದುಬಾರಿ ವೆಚ್ಚ
* ಅವಲಂಬನೆ ಹೆಚ್ಚಳ
* ಪೂರೈಕೆ ಆಗುವ ಕಾವೇರಿ ನೀರಿನ ಬಳಕೆಯಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯನಿಂದ ಕೆರೆಗಳ ಮೇಲೆ ಸ್ಥಳೀಯವಾಗಿ ಹೆಚ್ಚಿನ ಹೊರೆ ಬೀಳುತ್ತಿದೆ
104 ಕೋಟಿ ಲೀಟರ್
ನಗರದಲ್ಲಿ ದಿನವೊಂದಕ್ಕೆ ಉತ್ಪಾದನೆಯಾಗುವ ತ್ಯಾಜ್ಯ ನೀರು 14 ನೀರು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (ಡಬ್ಲ್ಯುಟಿಪಿ) ದಿನವೊಂದಕ್ಕೆ 77.8 ಕೋಟಿ ಲೀಟರ್ ನೀರನ್ನು ಮಾತ್ರ ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಸಂಸ್ಕರಿಸಿದ ಹಾಗೂ ಸಂಸ್ಕರಿಸದ ನೀರನ್ನು ಸ್ಥಳೀಯವಾಗಿ ಹರಿಯಬಿಡಲಾಗುತ್ತಿದೆ.
ಇವೆಲ್ಲವೂ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಸೇರಿಕೊಳ್ಳುತ್ತಿವೆ. ರಾಜಕಾಲುವೆ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದ್ದು, ಮಳೆ ಬಂದಾಗ ಮಳೆ ನೀರನ್ನು ಒಯ್ಯುವ ಸಾಮರ್ಥ್ಯ ಕಡಿಮೆ ಆಗುತ್ತಿದೆ.
*
ಪ್ರಜಾವಾಣಿ ಗ್ರಾಫ್ರಿಕ್ಸ್: ಭಾವು ಪತ್ತಾರ್, ಮಾಹಿತಿ ನಿರ್ವಹಣೆ: ಪ್ರವೀಣ್‌ಕುಮಾರ್ ಪಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.