ADVERTISEMENT

ಪೀಣ್ಯ: ಜನೌಷಧಿ ಕೇಂದ್ರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:14 IST
Last Updated 12 ಫೆಬ್ರುವರಿ 2019, 19:14 IST
ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ನಗರಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿ ಔಷಧಗಳನ್ನು ಪರಿಶೀಲಿಸಿದರು
ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ನಗರಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿ ಔಷಧಗಳನ್ನು ಪರಿಶೀಲಿಸಿದರು   

ಪೀಣ್ಯ ದಾಸರಹಳ್ಳಿ: ಇಲ್ಲಿನ ಬೈಲಪ್ಪ ಸರ್ಕಲ್ ಬಳಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿದರು.

ಬಳಿಕ ಸದಾನಂದಗೌಡ ಮಾತನಾಡಿ, ‘ಈ ಕೇಂದ್ರದಲ್ಲಿ 805 ವಿವಿಧ ಔಷಧಗಳಿವೆ. ಅತಿ ಕಡಿಮೆ ಎಂದರೆ ಶೇ 10 ರಿಂದ ಶೇ 80ರಷ್ಟು ರಿಯಾಯಿತಿ ದರದಲ್ಲಿ ಸುಲಭವಾಗಿ ಸಿಗಲಿವೆ. ಔಷಧಿಯ ಗುಣಮಟ್ಟವನ್ನು ತನಿಖೆಯಿಂದ ಪರಿಶೀಲನೆ ಮಾಡಲಾಗಿದೆ. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದರು.

ಎಸ್.ಮುನಿರಾಜು ಮಾತನಾಡಿ 'ದಾಸರಹಳ್ಳಿಗೆ ಇದು ಮೊದಲನೇ ಜನೌಷಧಿ ಕೇಂದ್ರವಾಗಿದೆ. ಈ ಭಾಗದಲ್ಲಿ ಕಾರ್ಮಿಕರು ಹಾಗೂ ಹಿಂದುಳಿದ ಬಡಜನರು ಸಾಕಷ್ಟು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹತ್ತಾರು ಕಡೆ ಕೇಂದ್ರಗಳನ್ನು ತೆರೆಯಲಾಗುತ್ತದೆ' ಎಂದರು.

ADVERTISEMENT

ಪಾಲಿಕೆ ಸದಸ್ಯರಾದ ಎನ್.ಲೋಕೇಶ್, ಉಮಾದೇವಿ ನಾಗರಾಜ್, ಯುವಮೋರ್ಚಾಅಧ್ಯಕ್ಷ ಸತೀಶ್, ಬಿಜೆಪಿ ಮುಖಂಡರಾದ ಎಂ.ಸಿದ್ದರಾಜು, ಬಿ.ಎಂ.ನಾರಾಯಣ್, ಬಿ.ಟಿ.ಶ್ರೀನಿವಾಸ್, ಆರ್.ಸಿ.ದೊರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.