ADVERTISEMENT

ಬೆಂಗಳೂರು ನಗರದಲ್ಲಿ ಭೌತವಿಜ್ಞಾನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2015, 20:27 IST
Last Updated 21 ಜೂನ್ 2015, 20:27 IST
ಬೆಂಗಳೂರು ನಗರದಲ್ಲಿ ಭೌತವಿಜ್ಞಾನ ಸಮ್ಮೇಳನ
ಬೆಂಗಳೂರು ನಗರದಲ್ಲಿ ಭೌತವಿಜ್ಞಾನ ಸಮ್ಮೇಳನ   

ಬೆಂಗಳೂರು: ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರದಿಂದ  ಜೂನ್‌ 27ರ ವರೆಗೆ ‘ಸ್ಟ್ರಿಂಗ್ಸ್‌ –2015’ ಎಂಬ ಭೌತವಿಜ್ಞಾನ ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಅನೇಕ ದೇಶಗಳ  ಖ್ಯಾತ ಭೌತವಿಜ್ಞಾನಿಗಳು ಭಾಗವಹಿಸಲಿದ್ದಾರೆ.

ವಿಶ್ವದಾದ್ಯಂತ ಇರುವ ‘ಸ್ಟ್ರಿಂಗ್ಸ್‌ ಥಿಯರಿ ಕಮ್ಯುನಿಟಿ’ಯ ಈ ವಾರ್ಷಿಕ ಸಮ್ಮೇಳನದಲ್ಲಿ ಭೌತವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಮತ್ತು ಸಂಶೋಧನೆಗಳ ಕುರಿತು ಚರ್ಚೆ, ಸಂವಾದಗಳು ನಡೆಯಲಿವೆ. ಭಾರತೀಯ ವಿಜ್ಞಾನ ಸಂಸ್ಥೆ, ಇಟಲಿಯ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನ ಕೇಂದ್ರ, ಇನ್ಫೊಸಿಸ್‌ ಸೈನ್ಸ್‌ ಫೌಂಡೇಶನ್‌, ಸಿಮೆನ್ಸ್‌ ಫೌಂಡೇಶನ್‌ ಮತ್ತು ಕ್ರೈಸ್ಟ್ ಯೂನಿವರ್ಸಿಟಿ ಸಹಯೋಗದಲ್ಲಿ ಈ ಸಮ್ಮೇಳನ ನಡೆಯುತ್ತಿದೆ.

ಜೂನ್‌ 26 ರಂದು ಸಮ್ಮೇಳನದಲ್ಲಿ ಭೌತವಿಜ್ಞಾನ ಕ್ಷೇತ್ರದ ವಿವಿಧ ರಂಗಗಳಲ್ಲಿ ಕಳೆದ 100 ವರ್ಷಗಳಲ್ಲಿ ಆಗಿರುವ ಬದಲಾವಣೆ ಕುರಿತ ವಿಶೇಷ ಗೋಷ್ಠಿಗಳು ನಡೆಯಲಿವೆ. ಕೊನೆಯ ದಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಗೋಷ್ಠಿಗಳು ಮತ್ತು ಮೂರು ಸಾರ್ವಜನಿಕ ಉಪನ್ಯಾಸಗಳು ನಡೆಯಲಿವೆ. ಈ ಸಮ್ಮೇಳನಕ್ಕೆ 300 ಭೌತವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇದೆ. ದೇಶದಲ್ಲಿ ಈ ಹಿಂದೆ 2001ರಲ್ಲಿ ಮುಂಬೈನಲ್ಲಿ ಇಂತಹ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅಮೆರಿಕದ ಪ್ರಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್‌ ಉಪನ್ಯಾಸ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.