ADVERTISEMENT

ಮಳಿಗೆಗಳಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತು ಹಾನಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2015, 20:04 IST
Last Updated 21 ಫೆಬ್ರುವರಿ 2015, 20:04 IST
ಬಂಬೂಬಜಾರ್‌ನ ಗ್ಯಾರೇಜ್‌ನಲ್ಲಿ  ಶನಿವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅನಾಹುತ­ದಲ್ಲಿ ಕಾರು ಸುಟ್ಟು ಹೋಗಿದೆ          	 –ಪ್ರಜಾವಾಣಿ ಚಿತ್ರ
ಬಂಬೂಬಜಾರ್‌ನ ಗ್ಯಾರೇಜ್‌ನಲ್ಲಿ  ಶನಿವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅನಾಹುತ­ದಲ್ಲಿ ಕಾರು ಸುಟ್ಟು ಹೋಗಿದೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಂಬೂಬಜಾರ್‌ನಲ್ಲಿ ಶನಿವಾರ ಬೆಳಗಿನ ಜಾವ ಪೀಠೋಪ­ಕರಣ ಮಳಿಗೆಗೆ ಹೊತ್ತಿಕೊಂಡ ಬೆಂಕಿ­ಯು ಪಕ್ಕದ ಗ್ಯಾರೇಜ್‌ಗೂ ವ್ಯಾಪಿ­­ಸಿ­ದ್ದ­ರಿಂದ ಲಕ್ಷಾಂತ­ರ ರೂಪಾಯಿ ಮೌಲ್ಯದ ವಸ್ತು­ಗಳು ಸುಟ್ಟು ­ಹೋಗಿವೆ.

ಬಂಬೂಬಜಾರ್‌ನಲ್ಲಿ ಇರ್ಷಾದ್ ಎಂಬುವರು ‘ಎಸ್‌.ಕೆ.­­­ಡೆಮಾಲಿ­ಷರ್ಸ್‌’­­ ಪೀಠೋ­­­­ಪಕರಣ ಮಳಿಗೆ ಇಟ್ಟು­­­­ಕೊಂಡಿದ್ದಾರೆ. ಆ ಮಳಿಗೆಯ ಪಕ್ಕ­ದಲ್ಲೇ ‘ಆಟೊ ಸ್ಕ್ರ್ಯಾಪ್‌ ಪಾಯಿಂಟ್’ ಗ್ಯಾರೇಜ್ ಇದೆ. ಬೆಳಿಗ್ಗೆ 4.45ಕ್ಕೆ ಇರ್ಷಾದ್ ಅವರ ಮಳಿಗೆ­ಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಕೆಲಕ್ಷಣಗಳಲ್ಲೇ ಬೆಂಕಿಯ ತೀವ್ರತೆ ಹೆಚ್ಚಾಗಿ, ಪಕ್ಕದ ಗ್ಯಾರೇಜ್‌­ಗೂ ವ್ಯಾಪಿ­ಸಿದೆ. ಕೂಡಲೇ ಸಾರ್ವ­­ಜನಿಕರು, ಪೊಲೀಸ್, ಅಗ್ನಿಶಾಮಕ ನಿಯಂ­ತ್ರಣ ಕೊಠಡಿಗೆ ಕರೆ ಮಾಡಿ­ದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿ­ಶಾಮಕ ಸಿಬ್ಬಂದಿ, ಐದು ತಾಸು ಕಾರ್ಯಾ­­ಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

‘ಪೀಠೋಪಕರಣಗಳು, ವಾಹನದ ಬಿಡಿ ಭಾಗಗಳು ಸೇರಿದಂತೆ ₨ 7 ಲಕ್ಷ ಹಾನಿಯಾಗಿದೆ’ ಎಂದು ಇರ್ಷಾದ್ ಹೇಳಿದ್ದಾರೆ. ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.