ಬೆಂಗಳೂರು: ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ 2011, 2012, 2013ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರಕಟಿಸಿದೆ. 2011 ನೇ ಸಾಲಿನಲ್ಲಿ ಬೆಳಗಾವಿಯ ಈಶ್ವರಚಂದ್ರ ಎಸ್. ಬೆಟಗೇರಿ ಅವರ ‘ಪಗಡೆಯಾಟ’, ದಕ್ಷಿಣ ಕನ್ನಡ ಜಿಲ್ಲೆ ಡಿ.ಎಸ್. ಶ್ರೀಧರ್ ಅವರ ‘ಯಕ್ಷಗಾನ ಪ್ರಸಂಗಮಾಲಿಕಾ’ ಹಾಗೂ ಬೆಂಗಳೂರಿನ ಜಿಡ್ಡು ಸದಾಶಿವ ಭಟ್ಟ ಅವರ ‘ಲಿಂಗಣ್ಣ’ ಕೃತಿಗಳು ಆಯ್ಕೆಯಾಗಿವೆ.
2012 ನೇ ಸಾಲಿನಲ್ಲಿ ಹೊಸಪೇಟೆಯ ದಿವಂಗತ ಬಸವರಾಜ ಮಲಶೆಟ್ಟಿ ಅವರ ‘ಗಿರಿಜಾ ಕಲ್ಯಾಣ’, ಉಡುಪಿಯ ಸುಬ್ರಹ್ಮಣಯ್ಯ ಬೈಪಡಿತ್ತಾಯ ಅವರ ‘ಸಾಧಕ ಸಂಪದ’ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸದಾಶಿವ ಭಟ್ಟ ಅವರ ‘ತ್ರಿಂಶತಿ’ ಕೃತಿಗಳು ಆಯ್ಕೆಯಾಗಿವೆ.
2013 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಮನೋಹರ ಎಸ್. ಕುಂದರ್ ಅವರ ಯಕ್ಷಗಾನ ‘ರಂಗವೈಭವ’, ದಿವಂಗತ ಸಾಣೂರು ಎಂ.ಶ್ರೀಧರ ಪಾಂಡಿ ಅವರ ‘ಜಿನಯಕ್ಷಗಾನ ಸಂಪುಟ’ ಹಾಗೂ ಬಳ್ಳಾರಿಯ ಮೋಹನ ಕುಂಟಾರ್ ಅವರ ‘ಯಕ್ಷಗಾನ ಸ್ಥಿತ್ಯಂತರ’ ಪುಸ್ತಕಗಳು ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.