ADVERTISEMENT

ರಾಷ್ಟ್ರಕವಿ ಆಯ್ಕೆಗೆ ಕೋ.ಚೆ ಅಧ್ಯಕ್ಷತೆ ಸಮಿತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2014, 19:30 IST
Last Updated 3 ಡಿಸೆಂಬರ್ 2014, 19:30 IST

ಬೆಂಗಳೂರು: ಕನ್ನಡದ ರಾಷ್ಟ್ರಕವಿ ಗೌರವಕ್ಕೆ ನಾಡಿನ ಹಿರಿಯ ಕವಿಯೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತಿ ಡಾ.ಕೋ. ಚೆನ್ನಬಸಪ್ಪ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ.

ರಾಷ್ಟ್ರಕವಿ ಪುರಸ್ಕಾರಕ್ಕೆ ಪಾತ್ರರಾಗಿದ್ದ ಡಾ.ಜಿ.ಎಸ್‌. ಶಿವರುದ್ರಪ್ಪ ಅವರು ನಿಧನರಾಗಿರುವ ಕಾರಣ ಮತ್ತೊಬ್ಬರನ್ನು ಆ ಪುರಸ್ಕಾರಕ್ಕೆ ಆಯ್ಕೆ ಮಾಡುವ ಸಲುವಾಗಿ ಈ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ 13 ಮಂದಿ ಸದಸ್ಯರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದಯಾನಂದ ಅವರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಸದಸ್ಯರು: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ, ಡಾ.ಎಚ್‌.ಎಸ್‌.ಪುಷ್ಪ, ಪ್ರೊ ಎಸ್‌.ಜಿ. ಸಿದ್ದರಾಮಯ್ಯ, ಡಾ.ವಿಷ್ಣುನಾಯ್ಕ (ಉತ್ತರ ಕನ್ನಡ), ಡಾ.ರೂಪ ಹಾಸನ, ಪ್ರಭು ಖಾನಾಪುರೆ (ಕಲಬುರ್ಗಿ), ಡಾ.ಕಾಳೇಗೌಡ ನಾಗವಾರ (ಮೈಸೂರು), ಡಾ.ಕೆ.ಷರೀಫ್ (ಹರಿಹರ), ಡಾ.ಗಿರಡ್ಡಿ ಗೋವಿಂದರಾಜು (ಧಾರವಾಡ).

ಪದನಿಮಿತ್ತ ಸದಸ್ಯರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌. ಹನುಮಂತಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.