ಬೆಂಗಳೂರು: ‘ಕಣ್ಣೀರು ಮತ್ತು ಕೆರಟೊಕೊನಸ್’ ವಿಷಯದಲ್ಲಿ ಕನ್ನಡಿಗ ಡಾ. ರೋಹಿತ್ ಶೆಟ್ಟಿ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ನೆದರ್‌ಲೆಂಡ್‌ನ ಮಾಸ್ಟ್ರಿಚ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಸಂದಿದೆ.
‘ಕೆರಟೊಕೊನಸ್’ ಎಂದು ಕರೆಯಲಾಗುವ ಈ ರೋಗವು ಕಣ್ಣಿಗೆ ಸಂಬಂಧಿಸಿದೆ. ರೋಗವನ್ನು ಪತ್ತೆಹಚ್ಚಲು ಮತ್ತು ಕ್ರಮೇಣ ಅದು ಬೆಳೆಯದಂತೆ ತಡೆಯುವುದರ ಕುರಿತಾಗಿದೆ. ಡಾ. ರೋಹಿತ್ ಶೆಟ್ಟಿ ಅವರು ಬೆಂಗಳೂರಿನ ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಹಾಗೂ ನೇತ್ರ ತಜ್ಞರಾಗಿದ್ದಾರೆ.
ಕಣ್ಣೀರಿನ ಕುರಿತು ಆಳ ಅಧ್ಯಯನ ಕೈಗೊಂಡಿರುವ ಅವರು, ಹನಿ ಕಣ್ಣೀರಿನಿಂದ ಅನೇಕ ಸಂಗತಿಗಳನ್ನು ಪತ್ತೆ ಹಚ್ಚಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.