ADVERTISEMENT

ಸಮ್ಮೇಳನಕ್ಕೂ ಮುಂಚೆಯೇ ಸಾಂಸ್ಕೃತಿಕ ನೀತಿ: ಬರಗೂರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2016, 19:40 IST
Last Updated 2 ನವೆಂಬರ್ 2016, 19:40 IST
ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ಎ.ಜೆ. ಸದಾಶಿವ, ಕೆ.ರೇವಣ್ಣ, ಜಿ. ರಾಮಕೃಷ್ಣ ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ
ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ಎ.ಜೆ. ಸದಾಶಿವ, ಕೆ.ರೇವಣ್ಣ, ಜಿ. ರಾಮಕೃಷ್ಣ ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ಸಾಹಿತ್ಯ ಸಮ್ಮೇಳನಕ್ಕಿಂತ ಮುಂಚಿತವಾಗಿಯೇ ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸುವುದಾಗಿ  ನೀತಿ ರಚನಾ ಉಪಸಮಿತಿಯ ಅಧ್ಯಕ್ಷರಾದ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ’ ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಭಾಗವತರು, ಗಾಯನ ಗಂಗಾ, ಶಿರೂರು ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಿದರೆ ಅದು ನನಗೂ ಹಾಗೂ ಸಾಂಸ್ಕೃತಿಕ ವಲಯಕ್ಕೂ ಸರ್ಕಾರ ಕೊಡುವ ಒಂದು ದೊಡ್ಡ ಉಡುಗೊರೆಯಾಗಲಿದೆ. ಅಲ್ಲದೆ ಸಮ್ಮೇಳನ ಅಧ್ಯಕ್ಷತೆ ಭಾಷಣದಲ್ಲಿ  ಒಂದು ಪುಟ ಕಡಿತಗೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಮಾತನಾಡಿ, ‘ನ್ಯಾಯಾಲಯಗಳು ಜನಹಿತಕ್ಕೆ ಪೂರಕವಾದ ಯಾವುದೇ ವರದಿಯನ್ನು ತಳ್ಳಿಹಾಕಲಾರವು. ಮೌಢ್ಯಾಚರಣೆ ನಿಷೇಧ ಕಾಯ್ದೆಯ ಜಾರಿಯಲ್ಲಿ ಸರ್ಕಾರ ಹಿಂಜರಿಯಬೇಕಿಲ್ಲ. ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ತಯಾರಿಸಿದ ವರದಿಗಳನ್ನು ಸರ್ಕಾರಗಳು ಮೂಲೆಗುಂಪು ಮಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.