ಬೆಂಗಳೂರು: ‘ಸವಿತಾ ಸಮಾಜದ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಬೇಕು ಮತ್ತು ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ರಾಜ್ಯ ಸವಿತಾ ಸಮಾಜದ ಪದಾಧಿಕಾರಿಯೂ ಆದ ವಿಧಾನ ಪರಿಷತ್ ಸದಸ್ಯ ಎಂ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ.
ವೇಣುಗೋಪಾಲ್ ಅವರ ಬೇಡಿಕೆಗೆ ಪೂರಕವಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಿಸುವಂತೆ ಮನವಿ ಮಾಡಿದ್ದಾರೆ.
ಕ್ಷೌರಿಕ ವೃತ್ತಿ ಮಾಡುವವರನ್ನೂ ಕಾರ್ಮಿಕರೆಂದು ಪರಿಗಣಿಸಿ ಭವಿಷ್ಯ ನಿಧಿ ಯೋಜನೆ ವಿಸ್ತರಿಸಬೇಕು, ಸಮಾಜದ ಮಹಿಳೆಯರಿಗೆ ಬ್ಯೂಟಿಷನ್ ಕೋರ್ಸ್ ಮಾಡಲು ತರಬೇತಿ ಶಾಲೆ ಆರಂಭಿಸಬೇಕು, ಸಮುದಾಯ ಭವನ ನಿರ್ಮಿಸಲು ಜಾಗ ನೀಡಬೇಕು ಮತ್ತಿತರ ಬೇಡಿಕೆಗಳನ್ನೂ ರಾಜ್ಯ ಸವಿತಾ ಸಮಾಜ ಮುಂದಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.