ಬೆಂಗಳೂರು: ಸಿನಿಮಾ ಮತ್ತು ಸಾಹಿತ್ಯದ ನಡುವೆ ನಿಕಟ ಸಂಬಂಧ ಇದೆ ಎಂದು ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಹೇಳಿದರು.
‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ‘ಸಾಹಿತ್ಯವನ್ನು ಒಂದು ಕಲೆಯಾಗಿ ಗ್ರಹಿಸಿದಂತೆ, ಸಿನಿಮಾದ ಶುದ್ಧ ರೂಪವನ್ನು ಕೂಡ ಕಲೆಯಾಗಿಯೇ ಕಾಣಬೇಕು’ ಎಂದು ಹೇಳಿದರು.
ಮುಂಬೈನಲ್ಲಿ ತಯಾರಾಗುವ ಸಿನಿಮಾಗಳ ಬಗ್ಗೆ ಪಿಎಚ್.ಡಿ ಪ್ರಬಂಧಗಳು ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಆದರೆ, ದೇಶದ ಇತರ ಸಿನಿಮಾಗಳ ಬಗ್ಗೆ ಪಿಎಚ್.ಡಿ ಪ್ರಬಂಧಗಳು ರಚನೆಯಾಗಿರುವುದು ತೀರಾ ಕಡಿಮೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.