ADVERTISEMENT

‘ಶ್ರೀಮಂತರಾದ ಬಿಜೆಪಿ ಮೇಯರ್‌ಗಳು’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2015, 19:30 IST
Last Updated 17 ಆಗಸ್ಟ್ 2015, 19:30 IST

ಬೆಂಗಳೂರು: ‘ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಸ್ವಚ್ಛ, ಸುಂದರ ಹಾಗೂ ಶ್ರೀಮಂತ ಆಗಲಿಲ್ಲ. ಆಡಳಿತ ನಡೆಸಿದವರು ಮಾತ್ರ ಶ್ರೀಮಂತರಾದರು’  ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ವ್ಯಂಗ್ಯವಾಡಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಉಪಮೇಯರ್ ಎಲ್‌. ಶ್ರೀನಿವಾಸ್‌ ಆದಾಯ ₹34 ಕೋಟಿಗೆ ಏರಿದೆ. ಮಾಜಿ ಉಪಮೇಯರ್‌ ಎಸ್‌. ಹರೀಶ್‌ ಹತ್ತಾರು ಕೋಟಿಯ ಒಡೆಯರು. ಮಾಜಿ ಮೇಯರ್‌ ಎಸ್‌.ಕೆ. ನಟರಾಜ್‌ ಪತ್ನಿಯ ಆಸ್ತಿ ₹18 ಕೋಟಿ. ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಆಸ್ತಿ ₹12 ಕೋಟಿ. ಇದು ಅವರ ಆಡಳಿತ ವೈಖರಿಗೆ ಸಾಕ್ಷಿ’ ಎಂದರು. 

‘ಪ್ರತಿ ವರ್ಷ ₹5 ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ ನಗರದ ಅಭಿವೃದ್ಧಿಗೆ ₹25 ಸಾವಿರ ಕೋಟಿ ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ನಗರದ ಅಭಿವೃದ್ಧಿಗೆ ಒಂದು ಕೋಟಿ ಕೊಡಲಿಲ್ಲ. ಅದರ ಬದಲು ₹9 ಸಾವಿರ ಕೋಟಿ ಸಾಲ ಮಾಡಿದೆ’ ಎಂದು ಟೀಕಿಸಿದರು. ನಟರಾದ ಶಶಿಕುಮಾರ್‌, ಬಿ.ಸಿ. ಪಾಟೀಲ್‌, ಚಿತ್ರ ನಿರ್ಮಾಪಕ ಎಸ್‌.ಎ.ಚಿನ್ನೇಗೌಡ, ನಟಿಯರಾದ ಭಾವನಾ, ಪ್ರಮೀಳಾ ಜೋಷಾಯ್‌  ಇದ್ದರು. ಬಳಿಕ ಅವರು ಸಿ.ವಿ. ರಾಮನ್‌ ನಗರ ಹಾಗೂ ದಾಸರಹಳ್ಳಿ ವಿಧಾನಸಭಾ  ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಮಂಗಳವಾರ ಹೆಬ್ಬಾಳ, ಮಹದೇವಪುರ, ಕೆ.ಆರ್‌.ಪುರ, 19ರಂದು ಬಸವನಗುಡಿ, ಪದ್ಮನಾಭನಗರ, ವಿಜಯನಗರ, ಗೋವಿಂದರಾಜನಗರ, ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.