ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 12ನೇ ತರಗತಿಯ ಬಾಕಿ ಉಳಿದಿರುವ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವ ಅಥವಾ ಪರ್ಯಾಯ ಮೌಲ್ಯಮಾಪನ ಮಾರ್ಗವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಸಿಇ ಚಿಂತನೆ ನಡೆಸಿವೆ ಎಂದು ಮೂಲಗಳು ಹೇಳಿವೆ.
ಪ್ರಮುಖ ವಿಷಯಗಳಿಗೆ ಕಡಿಮೆ ಅವಧಿಯ ಪರೀಕ್ಷೆಗಳನ್ನು ಆಗಸ್ಟ್‌ನಲ್ಲಿ ನಡೆಸುವ ಸಿಬಿಎಸ್‌ಇ ಪ್ರಸ್ತಾವವನ್ನು ಬಹುಪಾಲು ರಾಜ್ಯಗಳು ಬೆಂಬಲಿಸಿದರೂ ಕೋವಿಡ್ ಪರಿಸ್ಥಿತಿ ಇನ್ನೂ ಮುಂದುವರಿದ ಕಾರಣ ಪರೀಕ್ಷೆಗಳನ್ನು ರದ್ದುಗೊಳಿಸುವುದು ಮತ್ತು ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸುವ ಆಯ್ಕೆಗಳ ಬಗ್ಗೆಯೂ ಚಿಂತನೆ ನಡೆದಿದೆ ಎಂದೂ ತಿಳಿಸಿವೆ.
12ನೇ ತರಗತಿ ವಿದ್ಯಾರ್ಥಿಗಳು 11ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳ ಮಾಹಿತಿ ನೀಡುವಂತೆ, ಈ ನಡುವೆ ಸಿಐಸಿಎಸ್‌ಇ ಮಂಡಳಿ ತನ್ನ ಅಧೀನ ಶಾಲೆಗಳಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.