ಬೆಂಗಳೂರು: ಗಣೇಶ ಚತುರ್ಥಿ ಹಬ್ಬ ಮುಕ್ತಾಯವಾದ ಮೂರನೇ ದಿನ ಬಿಬಿಎಂಪಿ ವ್ಯಾಪ್ತಿಯ ಕೆರೆ ಹಾಗೂ ಕಲ್ಯಾಣಿಗಳಲ್ಲಿ ಒಟ್ಟು 17,576 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಮೂರ್ತಿಗಳ ವಿಸರ್ಜನೆ ಅಂಗವಾಗಿ ನಗರದ ವಿವಿಧ ಕಡೆ ವೈಭದವ ಶೋಭಾಯಾತ್ರೆಗಳು ನಡೆದವು.ಶನಿವಾರ ಮುಂಜಾನೆವರೆಗೂ ಕೆಲವು ಕಡೆ ಮೂರ್ತಿಗಳ ವಿಸರ್ಜನೆ ಮುಂದುವರಿದಿತ್ತು. ವಿಘ್ನೇಶ್ವರ ಉತ್ಸವ ಸಮಿತಿಯು ಹಲಸೂರು ಕೆರೆಯೊಂದರಲ್ಲೇ 71 ಮೂರ್ತಿಗಳ ವಿಸರ್ಜನೆ ನಡೆಸಿತು.
ಕೆರೆ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಿದ ಮೂರ್ತಿಗಳಲ್ಲಿ ಒಟ್ಟು 1,924 ವಿಗ್ರಹಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ( ಪಿಒಪಿ) ತಯಾರಿಸಿದವು. 15,652 ವಿಗ್ರಹಗಳು ಮಣ್ಣಿನಿಂದ ತಯಾರಿಸಿದವು. ಮೂರನೇ ದಿನ ನಗರದಲ್ಲಿ 143.5 ಟನ್ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿತ್ತು ಎಂದು ಪಾಲಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.