ಬೆಂಗಳೂರು:ಬಾಲ ಆರೋಪಿಗಳ ವಯಸ್ಸನ್ನು 18 ವರ್ಷಕ್ಕೆ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು `ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್' ಸಂಸ್ಥೆಯ ನಿರ್ದೇಶಕಿ ಕವಿತಾ ರತ್ನ ತಿಳಿಸಿದ್ದಾರೆ.
`18 ವರ್ಷದ ವಯೋಮಿತಿಯನ್ನು 16ಕ್ಕೆ ಇಳಿಸಬೇಕೆನ್ನುವ ಪ್ರಸ್ತಾವಿತ ಕಾನೂನಿನ ತಿದ್ದುಪಡಿಯ ಸಲಹೆಯನ್ನು ವಿರೋಧಿಸಿ ದೂರು ಕೊಟ್ಟವರಲ್ಲಿ ಈ ಸಂಸ್ಥೆಯು ಒಂದು. ಬಾಲಕ ಮತ್ತು ಬಾಲಕಿಯರನ್ನು ಶಿಕ್ಷಿಸುವ ಕಾಯ್ದೆಯಾಗದೇ ಬಾಲ ಆರೋಪಿಗಳ ಪುನಃಶ್ಚೇತನ ಕೂಡ ಒಂದು ಮಹತ್ವದ ಅಂಶವೆಂದು ತೀರ್ಪಿನಲ್ಲಿ ಘೋಷಿಸಿರುವುದು ಉತ್ತಮ ಬೆಳವಣಿಗೆಯಾಗಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.