ADVERTISEMENT

ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 25ನೇ ವರ್ಷದ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 15:26 IST
Last Updated 9 ಜನವರಿ 2024, 15:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹವನ್ನು ಫೆಬ್ರುವರಿ 29ರಂದು ಆಯೋಜಿಸಲಾಗಿದೆ.

ಬನಶಂಕರಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಈ ವಿವಾಹಮಹೋತ್ಸವಕ್ಕೆ ಎಲ್ಲ ಜಾತಿ, ಮತದವರೂ ವಧು–ವರರ ಹೆಸರನ್ನು ನೋಂದಾಯಿಸಬಹುದು ಎಂದು ವೇದಿಕೆಯ ವ್ಯವಸ್ಥಾಪಕ ಎ.ಎಚ್‌. ಬಸವರಾಜು ತಿಳಿಸಿದ್ದಾರೆ.

ADVERTISEMENT

ವಧು–ವರರಿಗೆ ಹೊಸ ಬಟ್ಟೆ, ಬಾಸಿಂಗ, ಕಂಕಣದಾರ, ಹೂವಿನಹಾರ, ಮಾಂಗಲ್ಯ, ಕಾಲುಂಗುರ, ಪೇಟ ನೀಡಲಾಗುತ್ತದೆ. ಬಂಧುಗಳು, ಅತಿಥಿಗಳು ಮತ್ತು ಸ್ಥಳೀಯರಿಗೆ ಊಟದ ವ್ಯವಸ್ಥೆ ಇರುತ್ತದೆ.

1999ರಲ್ಲಿ ಆರಂಭವಾದ ಸಾಮೂಹಿಕ ವಿವಾಹ ಮಹೋತ್ಸವ, ಪ್ರತಿ ವರ್ಷ ನಡೆಯುತ್ತಿದ್ದು, ಈವರೆಗೆ 1431 ಜೋಡಿಗಳು ವೈವಾಹಿಕ ಜೀವನ ಪ್ರವೇಶಿಸಿವೆ ಎಂದು ಮಾಹಿತಿ ನೀಡಿದರು. ವಿವರಗಳಿಗೆ 080–26712988, 70190 73889.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.