ADVERTISEMENT

ಮೆಟ್ರೊಗೆ ಮತ್ತೆ 265 ಮರ ಬಲಿ?

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:29 IST
Last Updated 6 ನವೆಂಬರ್ 2019, 21:29 IST
   

ಬೆಂಗಳೂರು: ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಮತ್ತೆ 265 ಮರಗಳು ಬಲಿಯಾಗಲಿವೆ.

ಪಾಟರಿ ಟೌನ್‌ನಿಂದ ಡೇರಿ ವೃತ್ತದವರೆಗಿನ ಸುರಂಗ ಮಾರ್ಗದ ನಿಲ್ದಾಣಗಳು ನಿರ್ಮಾಣವಾಗುವ ಕಡೆ ಒಟ್ಟು 324 ಮರಗಳನ್ನು ತೆರವು ಮಾಡಬೇಕಾಗುತ್ತದೆ. ಈ ಪೈಕಿ, 57 ಮರಗಳನ್ನು ಸ್ಥಳಾಂತರ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿದ್ಧತೆ ನಡೆಸಿದೆ. ಇನ್ನುಳಿದ 265 ಮರಗಳನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಲಿದೆ.

ಎರಡನೇ ಹಂತದ ಯೋಜನೆಯ ಕಾಮಗಾರಿಗಾಗಿ ಒಟ್ಟು 684 ಮರಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯ ಎದುರಾಗಿದೆ. ಈ ಪೈಕಿ 222 ಮರಗಳ ತೆರವಿಗೆ ಅನುಮತಿ ಅಗತ್ಯವಿಲ್ಲ. 577 ಮರಗಳನ್ನು ಸ್ಥಳಾಂತರ ಮಾಡಲಾಗಿದೆ. 107 ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪ್ರತಿಯಾಗಿ 8000 ಸಸಿಗಳನ್ನು ನೆಡಲಾಗಿದೆ. ಇವುಗಳನ್ನು ಬೆಳೆಸಲು ಬಿಬಿಎಂಪಿಯಲ್ಲಿ ₹ 63.37 ಲಕ್ಷ ಠೇವಣಿ ಇಡಲಾಗಿದೆ ಎಂದು ನಿಗಮ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.