ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಮಹಾತ್ಮ ಗಾಂಧಿ ರಸ್ತೆಯಿಂದ ವಿವೇಕಾನಂದ ರಸ್ತೆಯವರೆಗೆ 3 ಸಾವಿರ ಸಸಿಗಳನ್ನು ನೆಡಲಿದೆ. ಐಷಾರಾಮಿ ಹೋಟೆಲ್ ‘ದಿ ಪಾರ್ಕ್’ ಈ ಅಭಿಯಾನಕ್ಕೆ ಕೈ ಜೋಡಿಸಿದೆ.
ಈವರೆಗೆ 500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಇರುವ ವಾಹನ ನಿಲುಗಡೆ ಪ್ರದೇಶ, ಪಾದಚಾರಿ ಮಾರ್ಗ, ವಿಭಜಕಗಳ ಬಳಿಯ ಲಭ್ಯ ಇರುವ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ.
‘ಬೆಂಗಳೂರಿನಲ್ಲಿ ಕೈಗಾರಿಕಾ ವಲಯವು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಪರಿಸರ ಸಮತೋಲನ ಕಾಪಾಡಲು ಇಂತಹ ಕ್ರಮಗಳು ಅನಿವಾರ್ಯ. ‘ನಮ್ಮ ಮೆಟ್ರೊ’ ನಿಲ್ದಾಣಗಳ ಬಳಿಯಲ್ಲಿ ಮಾತ್ರವಲ್ಲದೆ, ನಮ್ಮ ಕಂಪನಿಯ ಎಲ್ಲ ಹೋಟೆಲ್‌ಗಳ ಆವರಣದಲ್ಲಿಯೂ ಸಸಿ ನೆಡಲು ಕ್ರಮ ಕೈಗೊಂಡಿದ್ದೇವೆ’ ಎಂದು ‘ದಿ ಪಾರ್ಕ್’ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.