ADVERTISEMENT

ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 4000 ಕೆ.ಜಿ. ಶ್ರೀಗಂಧ ವಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:38 IST
Last Updated 20 ಜುಲೈ 2024, 15:38 IST
ವಶಪಡಿಸಿಕೊಂಡಿರುವ ಶ್ರೀಗಂಧ ಮರದ ತುಂಡು 
ವಶಪಡಿಸಿಕೊಂಡಿರುವ ಶ್ರೀಗಂಧ ಮರದ ತುಂಡು    

ಬೆಂಗಳೂರು: ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 4,000 ಕೆ.ಜಿ. ಶ್ರೀಗಂಧ ಮರದ ತುಂಡುಗಳನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ದೂರವಾಣಿ ನಗರದಲ್ಲಿರುವ ಐಟಿಐ ಕಾರ್ಖಾನೆಯ ಗೋದಾಮಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧ ಮರದ ತುಂಡುಗಳನ್ನು ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಶ್ರೀಗಂಧ ವಶಕ್ಕೆ ಪಡೆದು ಕಾರ್ಖಾನೆಯನ್ನು ಬಂದ್ ಮಾಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಇಲಾಖೆಯ ರಘು, ಅಮೃತ್ ಏ. ದೇಸಾಯಿ, ಸಿದ್ದರಾಜು ಟಿ , ಅಶ್ವಿನ್ ಎಂ.ಜೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.