ಬೆಂಗಳೂರು: ಬಿಬಿಎಂಪಿಯ 8 ವಲಯಗಳಲ್ಲಿ ಖಾತಾಗೆ ಸಂಬಂಧಿಸಿದ 5,232 ಪ್ರಕರಣಗಳು ಬಾಕಿ ಇದ್ದು, 2,199 ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ.
ದಕ್ಷಿಣ ವಲಯದಲ್ಲಿ ಮಾತ್ರ ಮೂರು ದಿನಗಳ ‘ಖಾತಾ ಮೇಳ’ವನ್ನು ಹಮ್ಮಿಕೊಂಡಿದ್ದು, ಫೆ.3ರಿಂದ 5ರವರೆಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲು ಯೋಜಿಸಲಾಗಿದೆ.
ವಿಜಯನಗರ, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿ, ಜಯನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರಗಳಲ್ಲಿ 317 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಎಲ್ಲಾ ನಾಗರಿಕರು ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ತಮ್ಮ ಆಸ್ತಿಗಳಿಗೆ ಖಾತೆ ಹಾಗೂ ಖಾತೆಗೆ ಸಂಬಂಧಿಸಿದ ಎಲ್ಲಾ ಕೆಲಸವನ್ನು ಮೇಳದಲ್ಲಿ ಪೂರ್ಣಗೊಳಿಸಿಕೊಳ್ಳಬಹುದು ಎಂದು ವಲಯ ಆಯುಕ್ತ ಜಯರಾಮ್ ರಾಯ್‌ಪುರ ಹೇಳಿದ್ದಾರೆ.
ಯಲಹಂಕ ವಲಯದಲ್ಲಿ 157, ಮಹದೇವಪುರ–459, ದಾಸರಹಳ್ಳಿ–124, ಆರ್.ಆರ್. ನಗರ–302, ಪಶ್ಚಿಮ–326, ದಕ್ಷಿಣ–317, ಪೂರ್ವ–389 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 125 ಖಾತಾಗೆ ಸಂಬಂಧಿಸಿದ ಅರ್ಜಿಗಳು ಬಾಕಿ ಉಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.