ADVERTISEMENT

8 ರೈಲುಗಳ ಸಂಚಾರ ತಾತ್ಕಾಲಿಕ ರದ್ದು

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:56 IST
Last Updated 2 ಮೇ 2019, 19:56 IST
   

ಬೆಂಗಳೂರು: ರೈಲು ಮಾರ್ಗಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದರಿಂದ 8 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರೈಲ್ವೆ ಇಲಾಖೆ ರದ್ದುಗೊಳಿಸಿದೆ.

56503/56504 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್‌ –ವಿಜಯವಾಡ, ವಿಜಯವಾಡ–ಬೆಂಗಳೂರು ಕಂಟೋನ್ಮೆಂಟ್‌ ರೈಲು ಸಂಚಾರ
ವನ್ನು ಇದೇ 4ರಿಂದ 28 ದಿನಗಳವರೆಗೆ ರದ್ದುಪಡಿಸಲಾಗಿದೆ.

ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಅರಕೋಣಂ ನಡುವೆ ಸಂಚರಿಸುವ ಪ್ಯಾಸೆಂಜರ್‌ 56262 ಸಂಖ್ಯೆಯ ರೈಲನ್ನು ಜೋಲಾರ್‌ಪೇಟೆವರೆಗೆ ಮಾತ್ರ ಓಡಿಸಲಾಗುತ್ತದೆ. ಜೋಲಾರ್‌ ಪೇಟೆಯಿಂದ ಅರಕೋಣಂವರೆಗೆ ರೈಲು ಸಂಚಾರ ಇರುವುದಿಲ್ಲ. ಜೋಲಾರ್‌ ಪೇಟೆಯಿಂದ 56261 ಸಂಖ್ಯೆಯ ರೈಲು ಬೆಂಗಳೂರಿಗೆ ವಾಪಸ್ ಆಗಲಿದೆ.

ADVERTISEMENT

06571/06572 ಸಂಖ್ಯೆಯ ಬಾಣವಾಡಿ–ಹೊಸೂರು–ಬಾಣಸವಾಡಿ ರೈಲು ಇದೇ 4ರಿಂದ 31ರವರೆಗೆ ರದ್ದಾಗಿದೆ. ಹಾಗೇ, 5672/6574 ಬಾಣಸವಾಡಿ–ಹೊಸೂರು–ಬಾಣಸವಾಡಿ ರೈಲು ಕೂಡ ಸಂಚರಿಸುವುದಿಲ್ಲ.

06577/06578 ವೈಟ್‌ಫೀಲ್ಡ್‌–ಬಾಣಸವಾಡಿ–ವೈಟ್‌ಫೀಲ್ಡ್‌ ರೈಲು ಕೂಡ 4ರಿಂದ 31ರವರೆಗೆ ರದ್ದಾಗಿದೆ. 08301 ಸಂಬಾಳಪುರ–ಬಾಣಸವಾಡಿ ಎಕ್ಸ್‌ಪ್ರೆಸ್‌ ಮೇ 8, 15, 22 ಮತ್ತು 29ರಂದು ಕೃಷ್ಣರಾಜಪುರದಿಂದ ಬಾಣಸವಾಡಿ ತನಕ ರದ್ದಾಗಲಿದೆ.

ಬಾಣಸವಾಡಿ–ಸಂಬಾಳಪುರ ನಡುವೆ ಸಂಚರಿಸುವ 08302 ಸಂಖ್ಯೆಯ ರೈಲು, ಮೇ 9,16, 28 ಹಾಗೂ 30ರಂದು ಬಾಣಸವಾಡಿಯಿಂದ ಕೃಷ್ಣರಾಜಪುರದವರಗೆ ರದ್ದಾಗಲಿದೆ.

ಸಂಜೆ 4.30 ಹೊರಡಬೇಕಿದ್ದ 16585 ಸಂಖ್ಯೆಯ ಯಶವಂತಪುರ ಮಂಗಳೂರು ಎಕ್ಸ್‌ಪ್ರೆಸ್‌ ರೈಲುಮೇ 16, 23 ಮತ್ತು 30ರಂದು ರಾತ್ರಿ 8.30ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.