ADVERTISEMENT

ನಾಡಿನ 50 ಸಾಧಕಿಯರ ಬಗ್ಗೆ ಪುಸ್ತಕ: ಸಾಹಿತ್ಯ ಅಕಾಡೆಮಿ ಅಧ್ಯಕ್ಷ LN ಮುಕುಂದರಾಜ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:02 IST
Last Updated 6 ನವೆಂಬರ್ 2024, 16:02 IST
ಎಲ್.ಎನ್. ಮುಕುಂದರಾಜ್
ಎಲ್.ಎನ್. ಮುಕುಂದರಾಜ್   

ಬೆಂಗಳೂರು: ‘ಕರ್ನಾಟಕ ಸುವರ್ಣ ಸಂಭ್ರಮ–50ರ ಭಾಗವಾಗಿ ರಾಜ್ಯದ 50 ಮಹಿಳಾ ಸಾಧಕರ ಬಗ್ಗೆ ಪುಸ್ತಕಗಳನ್ನು ಹೊರತರಲಾಗುತ್ತಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಸ್ತಕಗಳನ್ನು ಹೊರತರಲು ಸರ್ಕಾರವು ₹30 ಲಕ್ಷ ಅನುದಾನ ನೀಡಿದೆ. 50 ಲೇಖಕರಿಂದ ಈ ಪುಸ್ತಕಗಳನ್ನು ಬರೆಸಲಾಗುತ್ತಿದೆ. ‘ಕನ್ನಡ ಭಾರತಿ’ ಯೋಜನೆಯಡಿ 100 ಪುಸ್ತಕಗಳು ಹೊರಬರಲಿವೆ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿನ ವಿವಿಧ ಕ್ಷೇತ್ರಗಳ 100 ಸಾಧಕರನ್ನು ಗುರುತಿಸಿ, ಅವರ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ’ ಎಂದರು. 

‘ಕೃಷಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಅಷ್ಟಾಗಿ ಪುಸ್ತಕಗಳು ಲಭ್ಯವಿಲ್ಲ. ಆದ್ದರಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಸಹಯೋಗದಲ್ಲಿ ಕೃಷಿಗೆ ಸಂಬಂಧಿಸಿದಂತೆಯೂ ಪುಸ್ತಕಗಳನ್ನು ಹೊರತರಲಾಗುವುದು. ಜಿಕೆವಿಕೆಯಲ್ಲಿ ರೈತರು ಹಾಗೂ ಲೇಖಕರ ಕಾರ್ಯಾಗಾರ ನಡೆಸಿ, ರೈತರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.