ADVERTISEMENT

ಸಮಾಜ ಕಟ್ಟಲು ಅದ್ಭುತ ಅಸ್ತ್ರ ವಿದ್ಯೆ: ಎಸ್.ನಾರಾಯಣ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 22:22 IST
Last Updated 11 ಜೂನ್ 2023, 22:22 IST
ಕೆ.ಆರ್. ಪುರ ಸಮೀಪದ ಕುಂದಲಹಳ್ಳಿಯ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ಕಲ್ಚರಾ-23’ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ವೇಷಭೂಷಣ ಪ್ರದರ್ಶನ
ಕೆ.ಆರ್. ಪುರ ಸಮೀಪದ ಕುಂದಲಹಳ್ಳಿಯ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ಕಲ್ಚರಾ-23’ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ವೇಷಭೂಷಣ ಪ್ರದರ್ಶನ   

ಕೆ.ಆರ್.ಪುರ: ಸಮಾಜವನ್ನು ಕಟ್ಟಲು ವಿದ್ಯೆ ಅದ್ಭುತವಾದ ಅಸ್ತ್ರ ಮತ್ತು ಆಸ್ತಿ ಎಂದು ನಿರ್ದೇಶಕ ಎಸ್. ನಾರಾಯಣ್ ತಿಳಿಸಿದರು.

ಕೆ.ಆರ್. ಪುರ ಸಮೀಪದ ಕುಂದಲಹಳ್ಳಿಯ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುವ ‘ಕಲ್ಚರಾ-23’ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದಲ್ಲಿ ಅವರು ಮಾತನಾಡಿದರು.

ವಿದ್ಯೆ ಮತ್ತು ವಿವೇಕದಿಂದ ಬದುಕು ಮೌಲ್ಯಯುತವಾಗುತ್ತದೆ. ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಂಡು ಸಾಧನೆ ಕಡೆಗೆ ಗಮನಹರಿಸಬೇಕು. ಸಾಧನೆ ಜೊತೆಗೆ ಪೋಷಕರಿಗೆ ಮತ್ತು ಸಂಸ್ಥೆಗೆ ಕೀರ್ತಿ ತರಬೇಕು ಎಂದರು.

ADVERTISEMENT

ಎರಡು ದಿನಗಳ ಕಾಲ ನಡೆದ ‘ಕಲ್ಚರಾ-23’ ಸಾಂಸ್ಕೃತಿಕ ಸಂಭ್ರಮದಲ್ಲಿ 150 ಕಾಲೇಜುಗಳಿಂದ 10,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಸಿ.ಎಂ.ಆರ್.ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಸಿ.ರಾಮಮೂರ್ತಿ ಮಾಹಿತಿ ನೀಡಿದರು.

ಸಿಎಂಆರ್ ಜ್ಞಾನಧಾರ ಟ್ರಸ್ಟ್‌ ಕಾರ್ಯದರ್ಶಿ ಕೆ.ಸಿ. ಜಗನ್ನಾಥ ರೆಡ್ಡಿ, ಟ್ರಸ್ಟಿ ಡಾ.ಕೆ.ಸಿ. ರಾಜು ರೆಡ್ಡಿ, ಪ್ರಾಂಶುಪಾಲ ಡಾ.ಸಂಜಯ್ ಜೈನ್, ಉಪ ಪ್ರಾಂಶುಪಾಲ ಡಾ.ಬಿ.ನರಸಿಂಹ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.