ADVERTISEMENT

ನೀಟ್: ಆಕಾಶ್ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 1:08 IST
Last Updated 8 ಜೂನ್ 2024, 1:08 IST
ಆದಿತ್ಯ ಕುಮಾರ್ ಪಾಂಡಾ
ಆದಿತ್ಯ ಕುಮಾರ್ ಪಾಂಡಾ   

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌ ಯುಜಿ) ಆಕಾಶ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, 21 ಮಂದಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ಈ ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ 14 ವಿದ್ಯಾರ್ಥಿಗಳು ತರಗತಿಗಳಲ್ಲಿ ಓದಿದರೆ, ಏಳು ವಿದ್ಯಾರ್ಥಿಗಳು ದೂರಶಿಕ್ಷಣ ಕಾರ್ಯಕ್ರಮದಡಿ(ಡಿಸ್ಟೆನ್ಸ್‌ ಲರ್ನಿಂಗ್ ಪ್ರೊಗ್ರಾಂ) ಸಾಧನೆ ಮಾಡಿದ್ದಾರೆ.  

ಮೃದುಲ್ ಮಾನ್ಯ ಆನಂದ್ (ನವದೆಹಲಿ), ಆಯುಷ್ ನೌಗ್ರಯ್ಯ (ಝಾನ್ಸಿ), ಅಕ್ಷತ್ ಪಂಗಾರಿಯಾ (ಹಲ್ದ್ವಾನಿ), ಆದಿತ್ಯ ಕುಮಾರ್ ಪಾಂಡಾ (ಚೆನ್ನೈ), ಅರ್ಘ್ಯದೀಪ್ ದತ್ತಾ (ಕೋಲ್ಕತ್ತ), ಸಕ್ಷಮ್ ಅಗರ್ವಾಲ್ (ಸಿಲಿಗುರಿ), ಸುಜೋಯ್ ದತ್ತಾ (ನವದೆಹಲಿ), ಆರ್ಯನ್ ಯಾದವ್ (ಲಖನೌ), ಮಾನವ್ ಪ್ರಿಯದರ್ಶಿ (ರಾಂಚಿ), ಪಾಲನ್ಶಾ ಅಗರ್ವಾಲ್ (ಮುಂಬೈ), ಧ್ರುವ್ ಗಾರ್ಗ್, ಸಮಿತ್ ಕುಮಾರ್ ಸೈನಿ, ಇರಾಮ್ ಕ್ವಾಜಿ (ಜೈಪುರ), ಕೃತಿ ಶರ್ಮಾ (ಸೂರತ್) ಸೇರಿ ಹಲವು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. 

ADVERTISEMENT

ದೂರಶಿಕ್ಷಣ ಕಾರ್ಯಕ್ರಮದಡಿ ದಾಖಲಾದ ಕೃಷ್ಣಮೂರ್ತಿ ಪಂಕಜ್ ಶಿವಲ್, ಗುನ್ಮಯ್ ಗರ್ಗ್ ಸೇರಿ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

‘ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನೀಟ್‌ ಎದುರಿಸಲು ನಮ್ಮಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮಲ್ಲಿನ ಶೈಕ್ಷಣಿಕ ಪರಿಕಲ್ಪನೆ, ಶಿಸ್ತುಬದ್ಧ ಅಧ್ಯಯನ ಹಾಗೂ ವೇಳಾಪಟ್ಟಿ ಸೇರಿ ವಿವಿಧ ಕ್ರಮಗಳು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಮಹೋತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.