ADVERTISEMENT

ಆಪ್‍ನಿಂದ ‘ಶಾಕ್ ಬೇಡ’ ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 20:58 IST
Last Updated 14 ನವೆಂಬರ್ 2020, 20:58 IST

ಬೆಂಗಳೂರು: 'ನಗರದ ಜನರು ತಮ್ಮ ವಿದ್ಯುತ್ ಬಳಕೆ ಹಾಗೂ ಪಾವತಿಸುವ ಮೊತ್ತದ ತುಲನೆ ಮಾಡಲು ನೆರವಾಗಲು ಆಮ್ ಆದ್ಮಿ ಪಕ್ಷವು (ಎಎಪಿ) 'ಶಾಕ್ ಬೇಡ' ಎನ್ನುವ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ' ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,' ಈ ಆ್ಯಪ್ ನಲ್ಲಿ ಬೆಂಗಳೂರಿನ ಜನ ಕಳೆದ ತಿಂಗಳು ಪಾವತಿಸಿದ ವಿದ್ಯುತ್ ಬಿಲ್ ಮೊತ್ತವನ್ನು ನಮೂದಿಸಿ, ನವೆಂಬರ್ ತಿಂಗಳು ಎಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂಬುದನ್ನು ನೋಡಬಹುದು. ದೆಹಲಿಯ ನಿವಾಸಿಗಳು ಅಷ್ಟೇ ಪ್ರಮಾಣದ ವಿದ್ಯುತ್ ಉಪಯೋಗಿಸಿ, ಎಷ್ಟು ಬಿಲ್ ಪಾವತಿಸುತ್ತಾರೆ ಎಂಬುದನ್ನೂ ಪರಿಶೀಲಿಸಬಹುದು' ಎಂದರು.

'ವಿದ್ಯುತ್ ಸೋರಿಕೆ, ಕಳ್ಳತನ ತಡೆಗಟ್ಟದೆ, ಆ ಹೊರೆಯನ್ನು ಈಗಿನ ಮೂರೂ ಪಕ್ಷಗಳು ಜನರ ಮೇಲೆ ಹಾಕಿವೆ. ಈ ಕೂಡಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅವೈಜ್ಞಾನಿಕ ದರ ಹೆಚ್ಚಳದ ಆದೇಶವನ್ನು ಹಿಂಪಡೆಯಬೇಕು' ಎಂದು ಆಗ್ರಹಿಸಿದರು.

ADVERTISEMENT

'ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಲೇ ಇದೆ. ವಿದ್ಯುತ್ ದರ ಏರಿಕೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪಹೃದಯಹೀನರಂತೆ ವರ್ತಿಸುತ್ತಿದ್ದಾರೆ. ದರ ಏರಿಕೆ ವಿರುದ್ಧ 'ಶಾಕ್ ಬೇಡ-ಕಡಿಮೆ ಮಾಡಿ, ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ' ಎಂಬ ಘೋಷವಾಕ್ಯದೊಂದಿಗೆಆಪ್‍ ಬೃಹತ್ ಹೋರಾಟ ನಡೆಸಲಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.