ಬೆಂಗಳೂರು: ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಅಪಹರಿಸಿದ ಮಾಂಸ ಮಾರಾಟ ಅಂಗಡಿಯ ಮಾಲೀಕ ಸೇರಿದಂತೆ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಅಂಗಡಿ ಮಾಲೀಕ ಮೊಹಮ್ಮದ್, ಮಧು, ದಿನೇಶ್, ಕಾರ್ತಿಕ್ ಬಂಧಿತರು.
‘ಸೆ.10ರಂದು ಜಾವೀದ್ ಮಹಮದ್ ಎಂಬುವರು ಗಾಡಿಯಲ್ಲಿ ಗೋಮಾಂಸ ತುಂಬಿಕೊಂಡು ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತ್ತಿದ್ದರು. ಮೈಕೋಲೇಔಟ್ ಸಿಗ್ನಲ್ ಬಳಿ ಜಾವೀದ್‌ನನ್ನು ಆರೊಪಿಗಳು ಅಡ್ಡಗಟ್ಟಿ ಆರ್‌ಎಸ್‌ಎಸ್ ಕಾರ್ಯಕರ್ತರೆಂದು ಹೇಳಿ ಬೆದರಿಸಿದ್ದರು. ಬಳಿಕ ಜಾವೀದ್‌ನನ್ನು ಅಪಹರಿಸಿ ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹10 ಸಾವಿರ ಪಡೆದು ಜಾವೀದ್‌ನನ್ನು ಬಿಟ್ಟು ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.
ಸೇಂಟ್‌ಜಾನ್ ಸಿಗ್ನಲ್ ಬಳಿ ವಾಹನ ನಿಲುಗಡೆ ಮಾಡಲಾಗಿದೆ ಎಂದು ಜಾವೀದ್‌ಗೆ ಹೇಳಿದ್ದರು. ಅವರು ಬಂದು ನೋಡುವಾಗ ಗೋಮಾಂಸ ಇರಲಿಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಆರೋಪಿಗಳು ಗೋಮಾಂಸ ಕಳವು ಮಾಡಿ ಮಾರಾಟ ಮಾಡಿರುವುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.