ADVERTISEMENT

ಬೆಂಗಳೂರು | ಕ್ಯಾಂಪಸ್‌ ನೇಮಕಾತಿ: 3,006 ವಿದ್ಯಾರ್ಥಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2024, 16:18 IST
Last Updated 4 ಮೇ 2024, 16:18 IST
ರೇವಾ ವಿಶ್ವವಿದ್ಯಾಲಯದ ಕೆರಿಯರ್‌ ಡೆವಲಪ್‌ಮೆಂಟ್‌ ಸೆಂಟರ್‌ ಶನಿವಾರ ಹಮ್ಮಿಕೊಂಡಿದ್ದ ‘ಅಭಿನಂದನ್ 2024’ ಕ್ಯಾಂಪಸ್‌ ಸೆಲೆಕ್ಷನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿಕೊಂಡವು.
ರೇವಾ ವಿಶ್ವವಿದ್ಯಾಲಯದ ಕೆರಿಯರ್‌ ಡೆವಲಪ್‌ಮೆಂಟ್‌ ಸೆಂಟರ್‌ ಶನಿವಾರ ಹಮ್ಮಿಕೊಂಡಿದ್ದ ‘ಅಭಿನಂದನ್ 2024’ ಕ್ಯಾಂಪಸ್‌ ಸೆಲೆಕ್ಷನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿಕೊಂಡವು.   

ಬೆಂಗಳೂರು: ರೇವಾ ವಿಶ್ವವಿದ್ಯಾಲಯದ ಕೆರಿಯರ್‌ ಡೆವಲಪ್‌ಮೆಂಟ್‌ ಸೆಂಟರ್‌ ಶನಿವಾರ ಹಮ್ಮಿಕೊಂಡಿದ್ದ ‘ಅಭಿನಂದನ್ 2024’ ಕ್ಯಾಂಪಸ್‌ ಸೆಲೆಕ್ಷನ್‌ ಕಾರ್ಯಕ್ರಮದಲ್ಲಿ 3,006 ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿಕೊಂಡಿವೆ.

ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜ್‌ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ನಮ್ಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇಲ್ಲಿ ಕಲಿತವರಿಗೆ ಉತ್ತಮ ಉದ್ಯೋಗ ಸಿಗುತ್ತಿದೆ. ಇಂದು 3000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಕಂಪನಿಗಳು ಉದ್ಯೋಗಕ್ಕೆ ಆಯ್ಕೆ ಮಾಡಿರುವುದು ಇದಕ್ಕೆ ಸಾಕ್ಷಿ’ ಎಂದು ಹೆಮ್ಮೆಪಟ್ಟರು.

ಸಹ ಕುಲಾಧಿಪತಿ  ಶುಭಾ ಎ., ಕೆಪಿಐಟಿಯ ಕ್ಯಾಂಪಸ್‌ ನೇಮಕಾತಿ ಮತ್ತು ಸಂಬಂಧಗಳು ವಿಭಾಗದ ಮುಖ್ಯಸ್ಥ ಅಬಿನಾಶ್ ಪಿ. ಮಹಾಪಾತ್ರ, ಹಿರಿಯ ಟ್ಯಾಲೆಂಟ್ ಅಕ್ವಿಸಿಷನ್ ಮ್ಯಾನೇಜರ್  ಅರವಿಂದ್ ಎ.ಬೆಳಗುಂಬ ಮತ್ತು ಐಬಿಎಂನ ಪ್ರಧಾನ ಟ್ಯಾಲೆಂಟ್ ಅಕ್ವಿಸಿಷನ್ ಪಾಲುದಾರ ನವೀನ್ ರಾಮಯ್ಯ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.