ADVERTISEMENT

ಅಪಘಾತ- 2023| ಬೆಂಗಳೂರು: ಒಂದು ವರ್ಷದಲ್ಲಿ 909 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 15:52 IST
Last Updated 1 ಜನವರಿ 2024, 15:52 IST
<div class="paragraphs"><p>ಅಪಘಾತ</p></div>

ಅಪಘಾತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ 909 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ನಗರದಾದ್ಯಂತ 2023ರಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳ ಅಂಕಿ–ಅಂಶ ಪಟ್ಟಿಯನ್ನು ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

12 ತಿಂಗಳ ಅವಧಿಯಲ್ಲಿ 880 ಗಂಭೀರ ಸ್ವರೂಪದ ಅಪಘಾತಗಳು ಸಂಭವಿಸಿವೆ. 4,095 ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. 4,201 ಮಂದಿ ಗಾಯಗೊಂಡಿದ್ದರು.

ಸಂಪರ್ಕಸಹಿತ ನಿಯಮದ ಅಡಿ 2,49,624 ಪ್ರಕರಣಗಳನ್ನು ದಾಖಲಾಗಿವೆ. ತಂತ್ರಜ್ಞಾನದ ನೆರವಿನಿಂದ 87,25,321 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಂದ ₹184.83 ಕೋಟಿ ದಂಡ ಸಂಗ್ರಹಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ 7,055 ಪ್ರಕರಣ, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತ ಉಂಟು ಮಾಡಿದವರ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.