ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧ ಶನಿವಾರ →1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
20ಕ್ಕೂ ಹೆಚ್ಚು ಸಾಕ್ಷ್ಯಗಳನ್ನು
ಸಂಗ್ರಹಿಸಲಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ತನ್ನ ಸಹಚರರ ಜತೆ ತೆಗೆಸಿಕೊಂಡಿರುವ ಎಂಟು ಫೋಟೊಗಳು, ತಾಂತ್ರಿಕ ಸಾಕ್ಷ್ಯ ಮತ್ತು ಎಫ್‌ಎಸ್‌ಎಲ್ ವರದಿಯನ್ನು
ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜೂನ್ 9ರಂದು ಸಂಜೆ 6ರಿಂದ 8ರ
ಅವಧಿಯಲ್ಲಿ ರೇಣುಕಸ್ವಾಮಿ ಮೃತಪಟ್ಟಿದ್ದರು ಎಂದು ವೈದ್ಯರು ವರದಿ ನೀಡಿದ್ದರು. ಈ ಅವಧಿಯಲ್ಲಿ ದರ್ಶನ್ ಜತೆ ಚಿತ್ರದುರ್ಗ ರಾಘವೇಂದ್ರ ಹಾಗೂ ಇತರೆ ಆರೋಪಿಗಳು ಶೆಡ್‌ನಲ್ಲೇ ಫೋಟೊ ತೆಗೆಸಿಕೊಂಡಿದ್ದರು.
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಪವನ್ ಎಂಬಾತ ಫೋಟೊ ತೆಗೆದು, ರಾಘವೇಂದ್ರ ಸೇರಿ ಕೆಲ ಆರೋಪಿಗಳ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ.
ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ
ಪ್ರಕರಣದ 10ನೇ ಆರೋಪಿ ವಿನಯ್, ಪವನ್ ಮೊಬೈಲ್ ಪಡೆದು ಫೋಟೊಗಳನ್ನು ಅಳಿಸಿದ್ದ. ಮೊಬೈಲ್ ಫೋನ್ ವಶಪಡಿಸಿ
ಕೊಂಡಿದ್ದ ಪೊಲೀಸರು
ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆ ಮೊಬೈಲ್ ಫೋನ್‌ನಿಂದ ಫೋಟೊಗಳನ್ನು ಮರುಸಂಗ್ರಹಿಸ
ಲಾಗಿದೆ ಎಂದು ಮೂಲಗಳು ಹೇಳಿವೆ.
ನಗರದ ಪಟ್ಟಣಗೆರೆಯ ಶೆಡ್‌ನಲ್ಲಿ ಜೂನ್ 9ರಂದು ಕೊಲೆ ನಡೆದಿತ್ತು. ಕೊಲೆ ಆರೋಪದಡಿ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ 17 ಮಂದಿಯನ್ನು ಬಂಧಿಸಿದ್ದರು.
ದರ್ಶನ್ ಮತ್ತು ಇತರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸೆಪ್ಟೆಂಬರ್ 4 ರಂದು ಪೊಲೀಸರು ಸಲ್ಲಿಸಿದ್ದರು.
ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷ್ಯಾದಾರರ ಹೇಳಿಕೆಗಳನ್ನು
ಆರೋಪಪಟ್ಟಿಯಲ್ಲಿ ಒದಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.