ಬೆಂಗಳೂರು: ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ವಿವಿಧ ಮಾರ್ಗಗಳಲ್ಲಿ ರೈಲುಗಳಿಗೆ ಸಾಮಾನ್ಯ ಎರಡನೇ ದರ್ಜೆಯ ಎರಡು ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಮಾರ್ಚ್ 1ರಿಂದ 7ರವರೆಗೆ ಹೆಚ್ಚುವರಿ ಬೋಗಿ ವ್ಯವಸ್ಥೆ ಇರಲಿದೆ.
ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ–ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ–ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲು, ಹೊಸಪೇಟೆ–ಹರಿಹರ–ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು, ಯಶವಂತಪುರ-ವಿಜಯಪುರ–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉದಯ ಎಕ್ಸ್‌ಪ್ರೆಸ್ ಏಳು ದಿನ ಸಂಚಾರ: ಬೆಂಗಳೂರು ಮತ್ತು ಕೊಯಮತ್ತೂರು ನಿಲ್ದಾಣಗಳ ನಡುವೆ ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತಿದ್ದ ಉದಯ ಎಕ್ಸ್ ಪ್ರೆಸ್ ರೈಲು ಮಾರ್ಚ್ 5ರಿಂದ ವಾರದ ಏಳು ದಿನವೂ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.