ADVERTISEMENT

ಜಲಮಂಡಳಿ: ಏರಿಯೇಟರ್‌ ಶುಲ್ಕ ನೀರಿನ ಬಿಲ್‌ಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 23:34 IST
Last Updated 10 ಆಗಸ್ಟ್ 2024, 23:34 IST
<div class="paragraphs"><p>ಜಲಮಂಡಳಿ</p></div>

ಜಲಮಂಡಳಿ

   

ಬೆಂಗಳೂರು: ಜಲಮಂಡಳಿ ವತಿಯಿಂದ ನಲ್ಲಿಗಳಿಗೆ ಅಳವಡಿಸಲಾಗಿದ್ದ ಏರಿಯೇಟರ್‌ ಶುಲ್ಕವನ್ನು ನೀರಿನ ಬಿಲ್‌ನಲ್ಲಿ ಸೇರ್ಪಡಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ನಗರದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಸಮಪರ್ಕವಾಗಿ ನಿಭಾಯಿಸಲು ಮಾಲ್‌, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗೆ ಬಳಸುವ ನಲ್ಲಿಗಳಿಗೆ ಮಾರ್ಚ್‌ 31ರೊಳಗೆ ಏರಿಯೇಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.

ADVERTISEMENT

ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಹಲವಾರು ಕಟ್ಟಡಗಳಲ್ಲಿ ಏರಿಯೇಟರ್‌ ಅಳವಡಿಕೆ ಮಾಡಿರಲಿಲ್ಲ. ನೀರಿನ ಉಳಿತಾಯ ಮಾಡುವ ಉದ್ದೇಶದಿಂದ, ಗ್ರಾಹಕರ ಅನುಮತಿಯ ಮೇರೆಗೆ ಜಲಮಂಡಳಿ ಏರಿಯೇಟರ್‌ ಅಳವಡಿಸಿದೆ. ಪ್ರತಿ ನಲ್ಲಿಗೂ ₹50 ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಅದನ್ನು ಈ ತಿಂಗಳ ಬಿಲ್‌ನಲ್ಲಿ ಸೇರ್ಪಡಿಸಲಾಗುತ್ತದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.