ADVERTISEMENT

ನೀರು ಉಳಿಸುವ ಏರೋಬಿಕ್ಸ್ ಭತ್ತ!

ಒಣಭೂಮಿಯಲ್ಲೂ ಬೆಳೆಯಬಹುದು; ಬೆಂಗಳೂರು ಕೃಷಿ ವಿ.ವಿ ಪರಿಚಯ

ಅಮೃತ ಕಿರಣ ಬಿ.ಎಂ.
Published 17 ನವೆಂಬರ್ 2018, 19:15 IST
Last Updated 17 ನವೆಂಬರ್ 2018, 19:15 IST
ಏರೋಬಿಕ್ಸ್ ಭತ್ತದ ಬೆಳೆ
ಏರೋಬಿಕ್ಸ್ ಭತ್ತದ ಬೆಳೆ   

ಬೆಂಗಳೂರು: ಮಲೆನಾಡು ಅಥವಾ ಅಣೆಕಟ್ಟೆ ಭಾಗದ ನೀರಾವರಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವಭತ್ತದ ಬೆಳೆಯನ್ನು ಒಣಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಬಹುದು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಒಣಭೂಮಿಯಲ್ಲಿ ಬೆಳೆಯುವ ಏರೋಬಿಕ್ಸ್ ವಿಧಾನದ ಎರಡು ಭತ್ತದ ತಳಿಗಳನ್ನು ಕೃಷಿ ಮೇಳದಲ್ಲಿ ಪರಿಚಯಿಸಿದೆ.

ಎಂಎಎಸ್ 946–1 ಹಾಗೂ ಎಂಎಎಸ್ 26 ಹೆಸರಿನ ತಳಿಗಳ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.ನೀರಾವರಿಗೆ ಅವಕಾಶ ಕಡಿಮೆ ಇರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಿಗೆ ಇವು ಸಹಕಾರಿಯಾಗಬಲ್ಲವು ಎನ್ನುತ್ತಾರೆ ಸಂಶೋಧಕ ವೆಂಕಟೇಶ ಗಾಂಧಿ ಅವರು.

ವಿಶೇಷತೆ ಏನು: ಸಾಂಪ್ರದಾಯಿಕ ಕೆಸರುಗದ್ದೆ ಮಾದರಿಯಲ್ಲಿ ಭತ್ತ ಬೆಳೆಯುವ ವಿಧಾನಕ್ಕೆ ಹೋಲಿಸಿದರೆ ಏರೋಬಿಕ್ಸ್ ವಿಧಾನದಲ್ಲಿ ಶೇ 60ರಷ್ಟು ನೀರು ಉಳಿತಾಯವಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ಎಕರೆಗೆ 30 ಕೆ.ಜಿ ಬಿತ್ತನೆ ಭತ್ತ ಅಗತ್ಯವಿದ್ದರೆ, ಇಲ್ಲಿ ಕೇವಲ 3 ಕೆ.ಜಿ ಸಾಕು. ಒಂದು ಅಡಿ ಮತ್ತು ಅರ್ಧ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಸಸಿಯಿಂದ ಸಸಿಯ ನಡುವೆ ಅಂತರ ಹೆಚ್ಚಿರುವ ಕಾರಣ ಗಾಳಿ ಚೆನ್ನಾಗಿ ಸುಳಿದಾಡುತ್ತದೆ. ಇದಕ್ಕಿರುವ ಒಂದೇ ತೊಂದರೆ ಎಂದರೆ ಕಳೆ. ಎಕರೆಗೆ 20ರಿಂದ 22 ಕ್ವಿಂಟಲ್ ಇಳುವರಿ ಪಡೆಯಬಹುದು ಎನ್ನುತ್ತಾರೆ ತಜ್ಞರು.ರಾಗಿ, ಜೋಳ ಅಥವಾ ತರಕಾರಿ ಬೇಳೆಯುವ ರೀತಿಯಲ್ಲೇ ಇವನ್ನು ಬೆಳೆಯಬಹುದು.

ADVERTISEMENT

‘ಪೌಷ್ಟಿಕ’ ಭತ್ತ!

ಸತು, ಕಬ್ಬಿಣ, ಪ್ರೊಟೀನ್ ಅಂಶಗಳುತರಕಾರಿ, ಸೊಪ್ಪಿನ ಮೂಲಕ ಸಿಗುತ್ತವೆ. ಇನ್ನುಮುಂದೆ ಅಕ್ಕಿಯಲ್ಲೇ ಇವೆಲ್ಲವೂ ದೊರೆಯಲಿವೆ. ಪೌಷ್ಟಿಕ್–1 (ಸತು), ಪೌಷ್ಟಿಕ್–7 (ಕಬ್ಬಿಣ) ಹಾಗೂ ಪೌಷ್ಟಿಕ್–9 (ಪ್ರೊಟೀನ್) ಹೆಸರಿನಮೂರು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ದ್ವಿದಳ ಧಾನ್ಯಗಳ ಫಸಲು ಕಡಿಮೆ ಇರುವ ಪ್ರದೇಶಗಳು ಈ ಭತ್ತವನ್ನು ಬೆಳೆಯಬಹುದು. ಪೌಷ್ಟಿಕಾಂಶ ಕೊರತೆಯಿರುವ ಮಕ್ಕಳಿಗೆ ಈ ಅಕ್ಕಿಯಿಂದ ಮಾಡಿದ ಅನ್ನ ಉಪಯುಕ್ತ. ಸಾಂಪ್ರದಾಯಿಕ ಕೆಸರುಗದ್ದೆ ಹಾಗೂ ಏರೋಬಿಕ್ಸ್–ಎರಡೂ ಮಾದರಿಗಳಲ್ಲಿ ಬೆಳೆಯಬಹುದಾಗಿದೆ. ಈ ತಳಿಗಳ ಗುಣವಿಶೇಷಗಳನ್ನು ಅರಿತು ಪ್ರಾತ್ಯಕ್ಷಿತೆ ತಾಕುಗಳತ್ತ ರೈತರು ಎಡತಾಕುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.