ADVERTISEMENT

ಬೆಂಗಳೂರು ಜೋಡಿ ಕೊಲೆ: ಸುಪಾರಿ ನೀಡಿದ್ದ ಆರೋಪದಡಿ ಜಿ-ನೆಟ್ ಕಂಪನಿ ಮಾಲೀಕನ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 6:22 IST
Last Updated 13 ಜುಲೈ 2023, 6:22 IST
ಹತ್ಯೆಯಾದ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ವಿನುಕುಮಾರ್ (ಎಡದಿಂದ)
ಹತ್ಯೆಯಾದ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ವಿನುಕುಮಾರ್ (ಎಡದಿಂದ)   

ಬೆಂಗಳೂರು: ಏರೋನಿಕ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಕೊಲೆ ಪ್ರಕರಣದಲ್ಲಿ ಜಿ-ನೆಟ್ ಕಂಪನಿ ಮಾಲೀಕ ಅರುಣ್‌ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜುಲೈ 11ರಂದು ನಡೆದಿದ್ದ ಕೊಲೆ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು, ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.

'ವ್ಯವಹಾರದ ವೈಷಮ್ಯದಿಂದಾಗಿ ಕೊಲೆ ಮಾಡಲು ಅರುಣ್ ಸುಪಾರಿ ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಅಪರಾಧ ಸಂಚು ಹಾಗೂ‌ ಕೊಲೆ ಆರೋಪದಡಿ ಅರುಣ್‌ನನ್ನು ಬಂಧಿಸಲಾಗಿದೆ' ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.

ADVERTISEMENT

'ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಎಲ್ಲರನ್ನೂ ಕಸ್ಟಡಿಗೆ ಪಡೆಯಲಾಗಿದೆ' ಎಂದರು.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ ಅವಳಿ ಕೊಲೆ | 'ಏರೋನಿಕ್ಸ್' ಎಂಡಿಗೆ ಹಲವು ಸಲ ಇರಿತ; ಸಿಇಒ ತಲೆ ಇಬ್ಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.