ಬೆಂಗಳೂರು: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಏಮ್ಸ್) ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ‘ನೀಟ್’ ಟಾಪರ್‌ಗಳು ಇಲ್ಲೂ ಸಾಧನೆ ತೋರಿದ್ದಾರೆ.
ನೀಟ್‌ನಲ್ಲಿ 36ನೇ ರ‍್ಯಾಂಕ್ ಗಳಿಸಿದ್ದ ಹಾಸನ ಜಿಲ್ಲೆಯ ಫಣೀಂದ್ರ ಅವರು ‘ಏಮ್ಸ್’ನಲ್ಲಿ 77ನೇ ರ‍್ಯಾಂಕ್ ಗಳಿಸಿದ್ದಾರೆ. 99ನೇ ರ‍್ಯಾಂಕ್ ಗಳಿಸಿದ್ದ ಪ್ರಜ್ಞಾ ಮಿತ್ರಾ ‘ಏಮ್ಸ್’ನಲ್ಲಿ 55ನೇ ರ‍್ಯಾಂಕ್ ಗಳಿಸಿದ್ದಾರೆ. ನೀಟ್‌ನಲ್ಲಿ 43ನೇ ರ‍್ಯಾಂಕ್ ಗಳಿಸಿದ್ದ ಮಹೇಶ್ ಆನಂದ್ ‘ಏಮ್ಸ್’ನಲ್ಲಿ 125ನೇ ರ‍್ಯಾಂಕ್ ಪಡೆದಿದ್ದಾರೆ.
ಫಣೀಂದ್ರ ಅವರಿಗೆ ನವದೆಹಲಿಯ ‘ಏಮ್ಸ್’ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುವ ಬಯಕೆ ಇತ್ತು. ಇದೀಗ ಅವರು ಗಳಿಸಿದ ರ‍್ಯಾಂಕ್‌ಗೆ ಅಲ್ಲಿ ಸೀಟು ಸಿಗುವ ಸಾಧ್ಯತೆ ಕಡಿಮೆ ಇದ್ದು, ಜೋಧಪುರ ಅಥವಾ ಭುವನೇಶ್ವರದಲ್ಲಿ ಸೀಟು ಸಿಗುವುದು ನಿಶ್ಚಿತ. ‘ನನಗೆ ಸರ್ಜನ್ ಆಗುವ ಗುರಿ ಇದೆ’ ಎಂದು ಅವರು ಹೇಳಿದರು.
ಪ್ರಜ್ಞಾ ಮಿತ್ರಾ ಅವರಿಗೆ ಹೃದ್ರೋಗ ಸರ್ಜನ್ ಆಗುವ ಬಯಕೆ ಇದೆ. ‘2014ರಲ್ಲಿ ನನ್ನ ತಂದೆ ಹೃದಯಾಘಾತಕ್ಕೆ ಮತ್ತು ಮಿದುಳಿನ ಪಾರ್ಶವಾಯುವಿಗೆ ತುತ್ತಾದರು. ಹೀಗಾಗಿ ವೈದ್ಯಕೀಯ ಕ್ಷೇತ್ರಕ್ಕೇ ಹೋಗುವ ಸಂಕಲ್ಪವನ್ನು ಅಂದು ಮಾಡಿದ್ದೆ’ ಎಂದು ಅವರು ಹೇಳಿದರು.
ನೀಟ್‌ನಲ್ಲಿ 208ನೇ ರ‍್ಯಾಂಕ್ ಗಳಿಸಿದ್ದಸಾಯಿ ರಾಂ ‘ಏಮ್ಸ್’ನಲ್ಲಿ 67ನೇ ರ‍್ಯಾಂಕ್ ಗಳಿಸಿದ್ದಾರೆ. ‘ನನಗೆ ಜಿಪ್‌ಮೆರ್ ಪ್ರವೇಶ ಪರೀಕ್ಷೆಯಲ್ಲಿ 37ನೇ ರ‍್ಯಾಂಕ್ ಬಂದಿದೆ. ಹೀಗಾಗಿ ಅಲ್ಲೇ ವೈದ್ಯಕೀಯ ವ್ಯಾಸಂಗ ಮುಂದುವರಿಸುವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.