ಬೆಂಗಳೂರು: ಬೆಂಗಳೂರು– ಅಬುಧಾಬಿ ಮಧ್ಯೆ ನೇರವಾಗಿ ಹಾರಾಟ ನಡೆಸುವ ಮೊದಲ ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳವಾರದಿಂದ ಆರಂಭಿಸಿದೆ.
ವಿಮಾನಯಾನ ಸಂಸ್ಥೆಯ ಅತಿ ದೊಡ್ಡ ನೆಲೆ ಬೆಂಗಳೂರು ಆಗಿದ್ದು, ವಾರಕ್ಕೆ 200ಕ್ಕೂ ಹೆಚ್ಚು ವಿಮಾನಗಳು 27 ನಗರಗಳನ್ನು ಸಂಪರ್ಕಿಸುತ್ತವೆ. ಬೆಂಗಳೂರು–ಅಬುಧಾಬಿ ಮತ್ತು ಅಬುಧಾಬಿ– ಬೆಂಗಳೂರಿಗೆ ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ವಿಮಾನಗಳು ಸಂಚರಿಸಲಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.