ADVERTISEMENT

‘ಅಕ್ಕಯ್‌’ ಕೃತಿಗೆ ಎರಡು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 20:02 IST
Last Updated 29 ಮಾರ್ಚ್ 2022, 20:02 IST
ಕೃತಿಯ ಮುಖಪುಟ
ಕೃತಿಯ ಮುಖಪುಟ   

ಬೆಂಗಳೂರು: ಬಹುರೂಪಿ ಪ್ರಕಾಶನದ ‘ಅಕ್ಕಯ್’ ಕೃತಿಗೆ ಪ್ರಕಟಣೆಯ ಉತ್ಕೃಷ್ಟ
ತೆಗಾಗಿ 2 ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ.

ಪಬ್ಲಿಷಿಂಗ್ ನೆಕ್ಸ್ಟ್ ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ ‘ಅಕ್ಕಯ್’ ಕೃತಿಯು ಪ್ರಕಟಣೆಯ ಉತ್ಕೃಷ್ಟತೆಗೆ, ‘ಕುಪ್ಪಳಿ ಡೈರಿ’ ಮುಖಪುಟ ವಿನ್ಯಾಸಕ್ಕಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ವಿವಿಧ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ ಅಕ್ಕಯ್ ಕೃತಿಯು ಪ್ರಕಟ ಣೆಯ ಉತ್ಕೃಷ್ಟತೆ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ನಡೆಸುವಸಾರ್ವಜನಿಕ ರಂಗದ ವಾರ್ಷಿಕ ಪ್ರಶಸ್ತಿ ಸ್ಪರ್ಧೆಯಲ್ಲಿ ಪುಸ್ತಕ ಪ್ರಕಟಣಾ ವಿಭಾಗದಲ್ಲೂ ‘ಅಕ್ಕಯ್’ ಕೃತಿ ಪ್ರಕಟಣೆಯಲ್ಲಿನ ಉತ್ಕೃಷ್ಟತೆಗಾಗಿ ಬೆಳ್ಳಿ ಪದಕ ಪಡೆದಿದೆ.

ADVERTISEMENT

ಈ ಕೃತಿಯ ವಿನ್ಯಾಸಕ್ಕೆ ಎಸ್.ಎಂ.ಸಾಗರ್, ಅರುಣ್ ಕುಮಾರ್, ಛಾಯಾಗ್ರಾಹಕ ಮನುಕುಮಾರ್, ರೀಗಲ್ ಪ್ರಿಂಟರ್ಸ್ ವೆಂಕಟೇಶ್ ಅವರ ಕೊಡುಗೆ ಇದೆ. ‘ಅಕ್ಕಯ್’ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರ ಆತ್ಮಕಥೆ.ಪ್ರೊ.ಡೊಮಿನಿಕ್ ಡಿ. ಅವರು ಇದನ್ನು ನಿರೂಪಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.