ADVERTISEMENT

ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್

ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್‌ ಉರುಳಿಸಿ ಶೆಡ್‌ ನಿರ್ಮಿಸಿದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 17:19 IST
Last Updated 19 ಅಕ್ಟೋಬರ್ 2024, 17:19 IST
<div class="paragraphs"><p>ನಟ ಮಯೂರ್ </p></div>

ನಟ ಮಯೂರ್

   

ಬೆಂಗಳೂರು: ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್‌ ಉರುಳಿಸಿ ಶೆಡ್‌ ನಿರ್ಮಿಸಿದ್ದ ಆರೋಪದ ಅಡಿ ನಟ ಮಯೂರ್‌ ಪಟೇಲ್‌ ಸೇರಿ ಹಲವರ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದ್ರಪಾಳ್ಯ ನಿವಾಸಿ ಶಾಲಿನಿ ಅವರು ನೀಡಿದ ದೂರು ಆಧರಿಸಿ ಮಯೂರ್‌ ಪಟೇಲ್‌, ಎನ್‌.ಆರ್‌.ಭಟ್ಟ, ಸುಬ್ರಹ್ಮಣ್ಯ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿ ಹರಳಕುಂಟೆ ಗ್ರಾಮದ ಸರ್ವೆ ನಂ.: 55/10ರಲ್ಲಿ 14 ಗುಂಟೆ ಜಮೀನು ನೋಂದಾಯಿತ ದಾನಪತ್ರದ ಮೂಲಕ ತನ್ನ ಪತಿ ಮಂಜುನಾಥ ರೆಡ್ಡಿಗೆ ಬಂದಿದೆ. ಈ ಜಮೀನಿನಲ್ಲಿ ಕಾಂಪೌಂಡ್‌ ಮತ್ತು ಖಾಲಿ ಜಾಗ ಇದೆ. ಈ ಜಾಗದ ವಿಚಾರವಾಗಿ ಮಯೂರ್‌ ಪಟೇಲ್‌ ಮತ್ತು ಎನ್‌.ಆರ್‌.ಭಟ್ಟ ವಿರುದ್ಧ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಸ್ವಾಧೀನಕ್ಕೆ ತೊಂದರೆ ನೀಡದಂತೆ ಆದೇಶಿಸಿದೆ. ಆದರೆ, ಆರೋಪಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಅ.18ರಂದು ಬೆಳಿಗ್ಗೆ ಅತಿಕ್ರಮವಾಗಿ ಪ್ರವೇಶಿಸಿ ಕಾಂಪೌಂಡ್ ಉರುಳಿಸಿ ನಷ್ಟ ಉಂಟು ಮಾಡಿದ್ದಾರೆ ಎಂದು ‌ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.