ADVERTISEMENT

ಬಿಬಿಎಂಪಿ ಶಾಲೆ–ಕಾಲೇಜುಗಳಿಗೆ ಖಾಸಗಿ ಅನುದಾನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 19:57 IST
Last Updated 14 ಜೂನ್ 2024, 19:57 IST
<div class="paragraphs"><p>BBMP</p></div>

BBMP

   

ಬೆಂಗಳೂರು: ಬಿಬಿಎಂಪಿಯ ಶಿಶುವಿಹಾರ ಸೇರಿದಂತೆ ಶಾಲಾ–ಕಾಲೇಜುಗಳನ್ನು ಶೈಕ್ಷಣಿಕವಾಗಿಉತ್ತಮಗೊಳಿಸಲು ಹಾಗೂ ಇತರೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳಿಗೆ ಅನುದಾನ ನೀಡಲು ಅವಕಾಶ ನೀಡಲಾಗಿದೆ.

ಪಾಲಿಕೆಯು 93 ಶಿಶುವಿಹಾರ, 16 ಪ್ರಾಥಮಿಕ, 33 ಪ್ರೌಢಶಾಲೆ, 18 ಪದವಿ ಪೂರ್ವ ಕಾಲೇಜು, 4 ಪ್ರಥಮ ದರ್ಜೆ ಕಾಲೇಜು ಹಾಗೂ 2 ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. 25,500ಕ್ಕೂ ಹೆಚ್ಚು ಬಡ ಹಾಗೂ ಎಲ್ಲಾ ವರ್ಗದ ಮಕ್ಕಳು ಉಚಿತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಶಾಲಾ/ಕಾಲೇಜುಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು

ADVERTISEMENT

ಸಂಘ-ಸಂಸ್ಥೆಗಳು ಸಿಎಸ್‌ಆರ್‌ ಅಡಿಯಲ್ಲಿ ಅನುದಾನವನ್ನು ಒದಗಿಸಲು ಮೂರು ಮಾದರಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕರು ಶಿಕ್ಷಣ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು.

ಮೊಬೈಲ್‌ 94801 80152, ಇ-ಮೇಲ್ eoeducation@yahoo.in ಅಥವಾ specialcommissioner education@gmail.comಗೆ ಪ್ರಸ್ತಾವ ಸಲ್ಲಿಸಬಹುದು ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹಲೋತ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.