ADVERTISEMENT

ಇಂದು ವಿಮೋವೆ ಪ್ರತಿಷ್ಠಾನದಿಂದ ‘ಆಲ್ಟರ್‌ನೇಟಿವ್‌’

​ಪ್ರಜಾವಾಣಿ ವಾರ್ತೆ
Published 31 ಮೇ 2024, 20:52 IST
Last Updated 31 ಮೇ 2024, 20:52 IST
   

ಬೆಂಗಳೂರು: ನಗರದ ಯುವ ಜನಾಂಗದಲ್ಲಿ ಪರಿಸರದ ಕಡೆಗೆ ಕಾಳಜಿ ಬೆಳೆಸಲು ಐದು ವರ್ಷಗಳಿಂದ ವಿಮೋವೆ ಪ್ರತಿಷ್ಠಾನ ‘ಆಲ್ಟರ್‌ನೇಟಿವ್‌’ ಆಯೋಜಿಸುತ್ತ ಬಂದಿದೆ. ಜೂನ್ 1ರಂದು ಶನಿವಾರ ಬೆಳಿಗ್ಗೆ 10‌ಕ್ಕೆ ‘ಆಲ್ಟರ್‌ನೇಟಿವ್‌’ ಹಮ್ಮಿಕೊಳ್ಳಲಾಗುತ್ತಿದೆ.

ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್ ಪ್ರಸಾದ್,  ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸ್‌ಮೂರ್ತಿ, ದಿ ನ್ಯಾಚುರಲಿಸ್ಟ್‌ ಸ್ಕೂಲ್‌ನ ಪ್ರಿಯಾ ವೆಂಕಟೇಶ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಮುಂಚಿತವಾಗಿಯೇ ಆಯೋಜಿಸಲಾಗುತ್ತಿದೆ. ವಿಡಿಯೊ ಮತ್ತು ರೀಲ್ಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೆದ್ದವರಿಗೆ ಬಹುಮಾನ ಹಾಗೂ ಸುಸ್ಥಿರ ಅಭಿವೃದ್ಧಿಯ ಬಗ್ಗೆ ದುಂಡುಮೇಜಿನ ಚರ್ಚೆ ನಡೆಯಲಿದೆ ಎಂದು ವಿಮೋವೆ ಪ್ರತಿಷ್ಠಾನದ ವಿನಯ್‌ ಶಿಂಧೆ ತಿಳಿಸಿದ್ದಾರೆ. 

ಪರಿಸರಕ್ಕೆ ಸಂಬಂಧಿಸಿದಂತೆ ಐದು ವಿಷಯಗಳ ಕುರಿತು ವಿಡಿಯೊ–ರೀಲ್ಸ್‌ ಸ್ಪರ್ಧೆ ಆಯೋಜಿಸಲಾಗಿತ್ತು. ಅದರ ಫಲಿತಾಂಶವನ್ನು ಪ್ರಕಟಿಸಿ, ಗೆದ್ದವರಿಗೆ ಬಹುಮಾನ ನೀಡಲಾಗುವುದು. ಜತೆಗೆ ಈ ವಿಡಿಯೊ ಮತ್ತು ರೀಲ್ಸ್‌ಗಳು ಆಯ್ದ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಬಿತ್ತರಗೊಳ್ಳಲಿವೆ. ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಟ್ಟುಕೊಂಡು ಆನ್‌ಲೈನ್‌ ಸಮೀಕ್ಷೆ ನಡೆಸಲಾಗಿತ್ತು.  15ರಿಂದ ಮೂವತ್ತು ವರ್ಷದ ಯುವ ಸಮೂಹ ಪಾಲ್ಗೊಂಡಿತ್ತು. ಈ ಸಮೀಕ್ಷೆಯ ವರದಿಯನ್ನು ಇದೇ ದಿನ ಬಹಿರಂಗಪಡಿಸಲಾಗುವುದು. ಜತೆಗೆ ಬೆಂಗಳೂರು ನಗರದ ಸುಸ್ಥಿರ ಅಭಿವೃದ್ಧಿಯಲ್ಲಿ ಯುವ ಶಕ್ತಿ ಕುರಿತು ದುಂಡುಮೇಜಿನ ಚರ್ಚೆ ನಡೆಯಲಿದೆ.

ADVERTISEMENT

ಕಾರ್ಯಕ್ರಮ ನಡೆಯುವ ಸ್ಥಳ: ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.