ADVERTISEMENT

ಅಂಬೇಡ್ಕರ್ ಕಾಲೇಜು ಘಟಿಕೋತ್ಸವ: 9 ಚಿನ್ನದ ಪದಕಗಳ ಗಳಿಸಿದ ಲಕ್ಷ್ಮೀ ಜಾನಕಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 20:30 IST
Last Updated 3 ಸೆಪ್ಟೆಂಬರ್ 2022, 20:30 IST
ಅಂಬೇಡ್ಕರ್ ತಾಂತ್ರಿಕ ಕಾಲೇಜಿನ 9ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪದಕಗಳೊಂದಿಗೆ ಸಂಭ್ರಮಿಸಿದರು
ಅಂಬೇಡ್ಕರ್ ತಾಂತ್ರಿಕ ಕಾಲೇಜಿನ 9ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪದಕಗಳೊಂದಿಗೆ ಸಂಭ್ರಮಿಸಿದರು   

ಕೆಂಗೇರಿ: ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಘಟಿಕೋತ್ಸವದಲ್ಲಿ ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳ 895 ವಿದ್ಯಾರ್ಥಿಗಳಿಗೆ ಶನಿವಾರ ಪದವಿ ಪ್ರದಾನ ಮಾಡಲಾಯಿತು.

ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಲಕ್ಷ್ಮೀ ಜಾನಕಿ ಕೆ.ಅವರು 9 ಚಿನ್ನದ ಪದಕ ಮುಡಿಗೇರಿಸಿಕೊಂಡು, ವಿಭಾಗದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದರು. ರಕ್ಷಿತ್ ಗೌಡ ಈ ವಿಭಾಗದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು.

ಲಕ್ಷ್ಮೀ ಜಾನಕಿ ಮಾತನಾಡಿ, ‘ಪೋಷಕರು, ಗುರುಗಳ ಮಾರ್ಗದರ್ಶನದಿಂದ ಯಶಸ್ಸು ಸಾಧಿಸಲು ಸಾಧ್ಯವಾಯಿತು’ ಎಂದರು. ಎಂ.ಟೆಕ್ ಪದವಿ ಪಡೆದು ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಹಂಬಲ ವ್ಯಕ್ತಪಡಿಸಿದರು.

ADVERTISEMENT

ಮಲ್ಲತ್ತಹಳ್ಳಿಯಲ್ಲಿ ಇರುವ ಅಂಬೇಡ್ಕರ್ ಕಾಲೇಜ್ ಆಫ್ ಟೆಕ್ನಾಲಜಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವೈಮಾನಿಕ ಅಭಿವೃದ್ಧಿ ಸಂಸ್ಥೆ ಮಹಾ ನಿರ್ದೇಶಕ ಡಾ.ಗಿರೀಶ್ ಎಸ್. ದಿಯೋಧರೆ ಮಾತನಾಡಿ, ‘ಪ್ರಸ್ತುತ ದೇಶದಲ್ಲಿ ಎಂಜಿನಿಯರಿಂಗ್ ಕ್ಷೇತ್ರವು ಅಭೂತಪೂರ್ವವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳೊಂದಿಗೆ ವೈಮಾನಿಕ, ಬಾಹ್ಯಾಕಾಶ, ಪರಿಸರ, ಗಣಕ ಯಂತ್ರ, ಕೃತಕ ಬುದ್ಧಿಮತ್ತೆಯಂತಹ ಹಲವು ತಾಂತ್ರಿಕ ವಿಷಯಗಳಲ್ಲಿ ದೇಶವು ದಾಪುಗಾಲು ಹಾಕುತ್ತಿದೆ’ ಎಂದು ಹೇಳಿದರು.

ಪಾಂಚಜನ್ಯ ವಿದ್ಯಾಪೀಠ ಟ್ರಸ್ಟ್ ಕಾರ್ಯದರ್ಶಿ ಎ.ಆರ್.ಕೃಷ್ಣ ಮೂರ್ತಿ, ಪಿವಿಪಿ ಟ್ರಸ್ಟ್‌ ಅಧ್ಯಕ್ಷ ಎಸ್.ಮರಿಸ್ವಾಮಿ, ಖಜಾಂಚಿ ಡಾ.ಬಿ.ಎನ್.ಉಮೇಶ್, ಟ್ರಸ್ಟಿ ಎಸ್. ಶಿವಮಲ್ಲು ಹಾಗೂ ಪ್ರಾಂಶುಪಾಲೆ ಮೀನಾಕ್ಷಿ. ಉಪ ಪ್ರಾಂಶುಪಾಲ ಡಾ.ಎಂ.ವಿ.ವಿಜಯಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.