ಬೆಂಗಳೂರು: ‘ಆಂಬುಲೆನ್ಸ್‌ಗಳಿಗೆ ದಾರಿ ಬಿಟ್ಟಿದ್ದಕ್ಕೆ ಬೇರೆ ವಾಹನಗಳ ಚಾಲಕರಿಗೆ ದಂಡ ಬಿದ್ದರೆ ಅದನ್ನು ಮನ್ನಾ ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಹೇಳಿದರು.
‘ಆಂಬುಲೆನ್ಸ್‌ಗಳಿಗೆ ದಾರಿ ಬಿಟ್ಟರೆ ದಂಡ ಬೀಳಲಿದೆ ಎನ್ನುವ ಭಯ, ಆತಂಕ ಬೇಡ. ಒಂದು ವೇಳೆ ಆಂಬುಲೆನ್ಸ್‌ಗೆ ಮುಂದೆ ಸಾಗಲು ಅವಕಾಶ ನೀಡಿದಾಗ ಕ್ಯಾಮೆರಾಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ದೃಶ್ಯ ಸೆರೆಯಾಗಿ ದಂಡ ಬಿದ್ದರೆ ಮನ್ನಾ ಮಾಡುತ್ತೇವೆ. ಅಂತಹ ಸಂದರ್ಭದಲ್ಲಿ ದಂಡ ಬಿದ್ದರೆ ಪ್ರಶ್ನೆ ಮಾಡಬಹುದು’ ಎಂದರು.
‘ಖಾಸಗಿ ಆಂಬುಲೆನ್ಸ್‌ಗಳ ಸಭೆಯನ್ನು ಕರೆಯಲಾಗಿದೆ. ಅಲ್ಲಿ ಕೆಲವು ವಿಚಾರ ಚರ್ಚಿಸ
ಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.